ಚರಂಡಿಯಲ್ಲಿ ಭ್ರೂಣ ಪತ್ತೆ

ಕಾರವಾರ: ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಭ್ರೂಣ ಪತ್ತೆಯಾಗಿರುವ ಘಟನೆ ತಾಲೂಕಿನ ಸದಾಶಿವಗಡದಲ್ಲಿ ಶುಕ್ರವಾರ ನಡೆದಿದೆ.

ಸುಮಾರು ಆರು ತಿಂಗಳದ್ದಾಗಿರಬಹುದಾದ ಭ್ರೂಣವಾಗಿದ್ದು ಸದಾಶಿವಗಡದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಳೆ ನೀರು ಹರಿಯುವ ಚರಂಡಿಯಲ್ಲಿ ಪತ್ತೆಯಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಭ್ರೂಣ ಅಕ್ರಮ ಸಂಬಂಧದಿಂದ ರೂಪ ಪಡೆದ ಭ್ರೂಣವಾಗಿದ್ದು ಮಹಿಳೆಯ ಗರ್ಭಪಾತ ಮಾಡಿಸಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ದೇವರಾಜು ಭೇಟಿ ನೀಡಿದ ಪರಿಶೀಲನೆ ನಡೆಸಿದ್ದಾರೆ. ಕಾರವಾರದ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.