ಸೆ.16ಕ್ಕೆ ಅಮೋಘ ಇ ಮೋಟಾರ್ಸ್ ಶೋ ರೂಂ ಉದ್ಘಾಟನೆ

ಶಿರಸಿ: ಕರ್ನಾಟಕದಲ್ಲೇ ಮೊಟ್ಟ ಮೊದಲ ಬಾರಿ ‘ಬ್ಯಾಟರಿ ಚಾಲಿತ ಮೋಟಾರ್ ಸೈಕಲ್’ ಬಿಡುಗಡೆ ಸಮಾರಂಭವನ್ನು ಸೆ.16 ರಂದು ನಗರದ ಬನವಾಸಿ ರಸ್ತೆಯ ಕಾನೇಶ್ವರಿ ಬಿಲ್ಡಿಂಗ್ ಬಳಿ ನಡೆಯಲಿದೆ.

ಶ್ರೀಮದ್ ಜಗದ್ಗುರು ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳವರ ದಿವ್ಯಾರ್ಶೀರ್ವಾದದೊಂದಿಗೆ ಅಮೋಘ ಇ ಮೋಟಾರ್ಸ್‍ನ ಹೊಸ ಶೋ ರೂಮ್ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಉದ್ಘಾಟಕರಾಗಿ ರಾಜ್ಯ ವಿಧಾನ ಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಗಮಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಹಾಯಕ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಪೋಲಿಸ್ ಉಪಾಧೀಕ್ಷಕ ಗೋಪಾಲಕೃಷ್ಣ ಟಿ.ನಾಯಕ, ಆರ್.ಟಿ.ಓ ಶಿರಸಿ ಇವರು ಉಪಸ್ಥಿತರಿರುವರು. ಕಾರ್ಯಕ್ರಮಕ್ಕೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಸಂಘಟಕರು, ತಂತ್ರಜ್ಞರಾದ ಮಹಾಬಲೇಶ್ವರ ಭಟ್ಟ, ಸಂತೋಷ ಹೆಬ್ಬಾರ, ಗಜಾನನ ಹೆಗಡೆ, ಪ್ರಸನ್ನ ಭಟ್ಟ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 8553215557,9986009201 ಸಂಪರ್ಕಿಸಬಹುದಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.