ಮುಂಡಗೋಡ ಲೊಕೋಪಯೋಗಿ ಕಚೇರಿಯಲ್ಲಿ ಇಂಜಿನಿಯರ್ಸ್ ದಿನಾಚರಣೆ


ಮುಂಡಗೋಡ: ಪಟ್ಟಣದ ಲೊಕೋಪಯೋಗಿ ಇಲಾಖೆ ಕಚೇರಿಯಲ್ಲಿ ಇಂಜನಿಯರ್ಸ್ ದಿನೋತ್ಸವ ಅಂಗವಾಗಿ ಸರ್. ಎಂ.ವಿಶ್ವೇಶ್ವರಯ್ಯರ ಜನ್ಮದಿನೋತ್ಸವ ಆಚರಿಸಲಾಯಿತು.

ರವಿವಾರ ಪಟ್ಟಣದ ಲೋಕೊಪಯೋಗಿ ಕಚೇರಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ ಸರ್. ಎಂ. ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪಬೆಳಗಿಸಿ ಮಾತನಾಡಿದ ಅವರು ವಿಶ್ವೇಶ್ವರಯ್ಯರವರು ಬಡತನದಿಂದ ಇಂಜನಿಯರಿಂಗ ವಿದ್ಯಾಭ್ಯಾಸ ಮಾಡಿ ಬೀದಿ ದೀಪದ ಬೆಳಕಲ್ಲಿ ಓದಿ ಉನ್ನತ ಸ್ಥಾನಕ್ಕೆ ಏರಿ ಕರ್ನಾಟಕದಲ್ಲಿ ಜನಮರೆಯದ ಕೆಲಸ- ಕಾರ್ಯಗಳನ್ನು ಮಾಡಿದವರು.

ಇಂದು ಸಹಾಯಕ ಕಾರ್ಯನಿರ್ವಾಹ ಹುದ್ದೆಯನ್ನೆ ಅಲಂಕರಿಸಬೇಕಾದರೆ 30-35 ವರ್ಷಕಾಯಬೇಕಾಗುತ್ತದೆ. ಆದರೆ ಎಂ.ವಿಶ್ವೇಶ್ವರಯ್ಯತಮ್ಮ ಪಾಂಡಿತ್ಯದಿಂದ ಅತಿ ಬೇಗನೆ ಉನ್ನತ ಸ್ಥಾನಕ್ಕೆ ಏರಿದರು. ಅವರು ಮಾಡಿದಂತಹ ಕೆಲಸಕಾರ್ಯಗಳು ಇಂದಿನ ಇಂಜನಿಯರ್ಸ್‍ಗಳಿಗೆ ಮಾದರಿ. ಅವರ ಆದರ್ಶಗಳು ನಮಗೆ ಸ್ಪೂರ್ತಿಯಾಗಿದೆ ಎಂದ ಅವರು ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಪ್ರಸ್ತುತವಾಗಿ ಕನ್ನಡ ಭಾಷೆ ಆಡಳಿತ ಭಾಷೆಯಾಗಿ 50 ಪ್ರತಿಶತ ಮಾತ್ರ ಇದ್ದು ಅದು ನೂರು ಪ್ರತಿಶತವಾಗಿ ಬಳಕೆಯಲ್ಲಿ ಬರಬೇಕು ಎಂದರು. ಜಿಲ್ಲಾ ಪಂಚಾಯತ್ ಸಹಾಯಕ ಇಂಜನಿಯರ ಪ್ರದೀಪ ಭಟ್ಟ, ತಹಶೀಲ್ದಾರ ಕಚೇರಿಯ ರಾಘವೇಂದ್ರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಜೀರುದ್ದಿನ ತಾಡಪತ್ರಿ, ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ವಸಂತ ರಾಠೋಡ ಎಂ.ವಿಶ್ವೇಶ್ವರಯ್ಯ ಕುರಿತು ಮಾತನಾಡಿದರು

ಎಫ್.ಡಿ.ಸಿ ಪದ್ಮಾ ಹಿತ್ತಲಮನಿ ಪ್ರಾರ್ಥಿಸಿದರು. ಸಹಾಯಕ ಇಂಜಿನಿಯರ ಎಚ್.ರಾಜು ಸ್ವಾಗತಿಸಿದರು. ರೇಷ್ಮಾಡೋರಿ ಸರ್.ಎಂ.ವಿಶ್ವೇಶ್ವರಯ್ಯನವರ ಕಿರು ಪರಿಚಯ ಮಾಡಿದರು. ಸುಭಾಸ ವಡ್ಡಟ್ಟಿ ನಿರ್ವಹಿಸಿದರು.

ಆರೋಗ್ಯ ಇಲಾಖೆಯ ಶ್ರೀಶೈಲ್, ವೀಣಾರಾಠೋಡ, ಇಲಾಖೆಯ ಸಿಬ್ಬಂದಿಗಳಾದ ರಾಘವೇಂದ್ರ ಬಂಡಾರಿ, ರಾಘವೇಂದ್ರ ಕುಡ್ತರಕರ ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.