ನಿವೃತ್ತ ಅರಣ್ಯ ರಕ್ಷಕನಿಗೆ ಚಾಕುವಿನಿಂದ ಇರಿದು ಹತ್ಯೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಂಗಡಿ ಗ್ರಾಮದಲ್ಲಿ ನಿವೃತ್ತ ಅರಣ್ಯ ರಕ್ಷಕರೊಬ್ಬರನ್ನು ಚಾಕುವಿನಿಂದ‌ ಇರಿದು ಹತ್ಯೆ ಮಾಡಿ ಘಟನೆ ಸಂಭವಿಸಿದೆ.

ಮೃತರನ್ನು ಮಾಜಾಳಿಯ ಜಾನ್ ಫರ್ನಾಂಡೀಸ್ (81) ಎಂದು ತಿಳಿದು ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಸ್ನಾನದ ಕೋಣೆಯಲ್ಲಿ ಕೊಲೆ ಮಾಡಲಾಗಿದೆ.
ರಾತ್ರಿ ಮಗ ಮನೆಗೆ ಬಂದಾಗ ಅಪ್ಪನ ಕೊಲೆಯಾಗಿರುವುದು ತಿಳಿದು ಬಂದಿದೆ‌. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು ಪರಿಶೀಲಿಸಿ, ತನಿಖೆ ಕೈಗೊಳ್ಳಲಾಗಿದೆ. ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.