ಸುವಿಚಾರ

ಕುಸುಮಸ್ತಬಕಸ್ಯೇವ ದ್ವಯೀ ವೃತ್ತಿರ್ಮನಸ್ವಿನಾಂ
ಮೂರ್ಧ್ನಿ ವಾ ಸರ್ವಲೋಕಸ್ಯ ವಿಶೀರ್ಯೇತ ವನೇಥ ವಾ ||

ಧೀರವಾದ, ಉದಾತ್ತವಾದ, ಆತ್ಮವಿಶ್ವಾಸಪೂರ್ಣವಾದ, ಲೋಕೋತ್ತರವಾದ ವ್ಯಕ್ತಿತ್ವವುಳ್ಳವರಿಗೆ ತಮ್ಮ ಬದುಕಿನಲ್ಲಿ ಹೂವಿನಗೊಂಚಲಿನಂತೆಯೇ ಎರಡು ಲಕ್ಷ್ಯಗಳು ಮಾತ್ರ ಇರುವುದು. ಒಂದೋ ತಮ್ಮ ಸ್ವ ಸಾಮರ್ಥ್ಯದಿಂದ ಅಲೋಕಸಾಧಾರಣವಾದ ಸಾಧನೆಯನ್ನು ಮಾಡಿ ಮಾನವ ಸಮಾಜದ ಅತಿ ಎತ್ತರದ ಸ್ಥಾನಕ್ಕೇರುವುದು ಇನ್ನೊಂದು ಅದ್ಯಾವುದನ್ನೂ ಮಾಡದೇ ಅತಿಸಾಮಾನ್ಯವಾದ ಜೀವನವನ್ನು ಗೌರವಪೂರ್ಣವಾಗಿ ಯಾರ ಹಂಗಿಲ್ಲದೇ ಬದುಕಿ ಎದ್ದುಹೋಗುವುದು. ಹೂವಿನ ಗೊಂಚಲೂ ಹಾಗೇ ಅಲ್ಲವೇ, ಒಂದೋ ಅದು ಲೋಕದಲ್ಲಿ ಜನಗಳ ಮುಡಿಗೇರುತ್ತದೆ ಅಥವಾ ಕಾಡಿನಲ್ಲಿ ಅಜ್ಞಾತವಾಗಿ ಅರಳಿ ತನ್ನಷ್ಟಕೆ ತಾನು ಕಳೆದುಹೋಗುತ್ತದೆ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.