ಉರ್ದು ಶಾಲೆಗೆ ಕಂಪೌಂಡ ವ್ಯವಸ್ಥೆ ಕಲ್ಪಿಸಿಕೊಡಿ: ಶಿಕ್ಷಣಾಧಿಕಾರಿಗೆ ಮನವಿ


ಮುಂಡಗೋಡ: ಪಟ್ಟಣದ ದೇಶಪಾಂಡೆ ನಗರದ ಸರಕಾರಿ ಉರ್ದು ಶಾಲೆಗೆ ಕಂಪೌಂಡ ವ್ಯವಸ್ಥೆ ಮಾಡುವಂತೆ ಜೋತಿ ಸಮಾಜ ಸೇವಾ ಸಂಸ್ಥೆ ಮತ್ತು ಲಮಾಣಿ ತಾಂಡಾದ ಜನ ವೇದಿಕೆಯ ನಾಯಕರು ಹಾಗೂ ಶಾಲೆಯ ಎಸ್.ಡಿ.ಎಮ್.ಸಿ ಕಮೀಟಿಯವರು ಸ್ಥಳಿಯ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ.

ಶಾಲೆಗೆ ಕಂಪೌಂಡ ವ್ಯವಸ್ಥೆ ಇಲ್ಲವಾಗಿದ್ದು ಇದರಿಂದ ಶಾಲೆಯ ಕಟ್ಟಡ ಮತ್ತು ಶೌಚಾಲಯಕ್ಕೆ ಹಾನಿ ಉಂಟಾಗುತ್ತಿದೆ, ಶಾಲಾ ಆವರಣದಲ್ಲಿ ಹಸು, ಕುರಿ, ಹಂದಿ ಮತ್ತು ಜಾನುವಾರುಗಳ ಹಾವಳಿಯಿಂದ ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದ್ದು, ಶಾಲೆಯ ಮುಂದಿನ ಚರಂಡಿಗಳಲ್ಲಿ ಮುಸರಿ, ಕಸ, ಕಡ್ಡಿ ಹಾಕುವುದರಿಂದ ಸೊಳ್ಳೆಗಳು ತುಂಬಿ ಮಕ್ಕಳ ಆರೋಗ್ಯಕ್ಕೆ ಹಾನಿ ಉಂಟಾಗುತ್ತಿದ್ದು ಕೂಡಲೆ ಕಂಪೌಂಡ ವ್ಯೆವಸ್ಥೆ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜ್ಯೋತಿ ಸಮಾಜ ಸೇವಾ ಸಂಸ್ಥೆಯ ಲಮಾಣಿ ತಾಂಡಾದ ಜನವೇದಿಕೆಯ ನಾಯಕರಾದ ಶಾಹೀನ್, ಮುಮ್ತಾಜ್, ಜರೀನಾ, ಅಮೀನ ತಿರುವಳ್ಳಿ ಹಾಗೂ ದೇಶಪಾಂಡೆ ನಗರದಉರ್ದು ಶಾಲೆಯಎಸ್ ಡಿ ಎಮ್ ಸಿ ಅಧ್ಯಕ್ಷರಾದ ಜಿಲಾನಿ ಹಾಗೂ ಇತರ ಸದಸ್ಯರು ಹಾಜರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.