ನ್ಯಾಸರ್ಗಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಆಚರಣೆ


ಮುಂಡಗೋಡ: ಶ್ರೀನಾರಾಯಣ ಗುರುಧರ್ಮ ಪರಿಪಾಲನಾ ದೇವಸ್ಥಾನ, ವಿವಿಧೋದ್ದೇಶ ಸಹಕಾರಿ ಸಂಘ, ಕ್ರೀಡಾಯುವಕ ಮಂಡಳ, ಮಹಿಳಾ ಸೇವಾ ಸಂಘ ಹಾಗೂ ನಾಮದೇವ ಆರ್ಯಈಡಿಗ ಬಿಲ್ಲವ ಅಭಿವೃದ್ಧಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನ್ಯಾಸರ್ಗಿ ಗ್ರಾಮದಲ್ಲಿ ಶುಕ್ರವಾರ ಜರುಗಿದ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯುತ್ಸವದಲ್ಲಿ ಸಾಹಿತಿ ಮತ್ತು ನಿವೃತ್ತ ಶಿಕ್ಷಕ ಸುಮುಖಾನಂದ ಜಲವಳ್ಳಿ ಅವರು ಉಪನ್ಯಾಸ ನೀಡಿದರು.

ಶಿರಸಿ ಅರಣ್ಯ ಸಂಚಾರಿದಳ ಡಿಎಫ್.ಒ. ಯು.ಡಿ.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಟಸ್ಟ್‍ನಅಧ್ಯಕ್ಷ ಸಿ.ಕೆ.ಅಶೋಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎ.ಸಿ.ಎಫ್.ಎಸ್.ಎಮ್. ವಾಲಿ, ಪ.ಪಂ. ಮುಖ್ಯಾಧಿಕಾರಿ ಸಂಗನ ಬಸಯ್ಯಾ, ಪ.ಪಂ.ಸದಸ್ಯ ಅಶೋಕ ಚಲವಾದಿ, ಬಸವರಾಜ ಓಶಿಮಠ ಮತ್ತಿತರರಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.