ಸುವಿಚಾರ

ಸತ್ಯೇನ ಲೋಕಂ ಜಯತಿ ದಾನೈರ್ಜಯತಿ ದೀನತಾಮ್
ಗುರೂನ್ ಶುಶ್ರೂಷಯಾ ಜೀಯಾದ್ಧನುಷಾ ಏವ ಶಾತ್ರವಾನ್ ||

ಸತ್ಯದಿಂದ ಜನಗಳ ಮನವನ್ನೂ, ದಾನದಿಂದ ದೀನತೆಯನ್ನೂ, ಗುರುಗಳನ್ನು ಸೇವೆಯಿಂದಲೂ ಮತ್ತು ಶತ್ರುಗಳನ್ನು ಧನುಸ್ಸಿನಿಂದಲೂ (ಆಯುಧದಿಂದಲೂ) ಗೆಲ್ಲತಕ್ಕದ್ದು. ಬದುಕಿನಲ್ಲಿ ಪ್ರತಿಯೊಂದು ವ್ಯಕ್ತಿ ಮತ್ತು ವಿಷಯಕ್ಕೂ ಒಂದಿಲ್ಲೊಂದಕ್ಕೆ ವಶ್ಯವಾಗಿರುತ್ತವೆ. ಲೋಕದಲ್ಲಿ ಬದುಕುವಾಗ ಈ ಸಂಗತಿಗಳು ತಿಳಿದಿರಬೇಕಾಗುತ್ತದೆ. ಹಿಂಡಿ ಮತ್ತು ಹಸಿಹುಲ್ಲು ತೋರಿಸಿದರೆ ಎಂಥ ಹಸುವೂ ಅದಕ್ಕೆ ವಶವಾಗಿ ಬರುತ್ತದೆ ಅನ್ನುವ ಸಾಮಾನ್ಯ ಜ್ಞಾನದಂತೆಯೇ ಬೇರೆ ಬೇರೆ ಸ್ತರದ ವ್ಯಕ್ತಿಗಳನ್ನು ಮತ್ತು ಸಂಗತಿಗಳನ್ನು ವಶವಾಗಿಸಿಕೊಳ್ಳುವ ತಂತ್ರವೇನು ಅನ್ನುವುದಕ್ಕೆ ಈ ಸುಭಾಷಿತ ದಾರಿದೋರುತ್ತದೆ. ದೀನತೆಯೆಂಬ ಮನಸಿನ ಜಾಡ್ಯವನ್ನು ಕಳೆದುಕೊಳ್ಳಲಿಕ್ಕೆ ತಾನು ಸ್ವತಃ ದಾನ ಮಾಡುವುದೇ ಉಪಾಯ ಎಂಬುದನ್ನು ವಿಶೇಷವಾಗಿ ಗಮನಿಸಬಹುದು.

– ಸುವಿಚಾರ ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.