ಸತ್ಯಸಾಯಿ ಸೇವಾ ಸಂಸ್ಥೆಯಿಂದ ನೆರೆ ಸಂತ್ರಸ್ಥರಿಗೆ ದಿನಬಳಕೆ ಸಾಮಗ್ರಿ ವಿತರಣೆ


ಕುಮಟಾ: ತಾಲೂಕಿನ ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ಹಲವು ನೆರೆ ಸಂತ್ರಸ್ತರಿಗೆ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ವತಿಯಿಂದ ದಿನಬಳಕೆಯ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.

ಹೆಗಡೆ ಗ್ರಾಮದ ತಾಡುಕಟ್ಟು, ಅಂಬಿಗರ ಕೇರಿ, ತಾರಿಬಾಗಿಲಗಳಲ್ಲಿ ಅತಿಯಾಗಿ ತೊಂದರೆಗೆ ಒಳಗಾದ 24 ಕುಟುಂಬಗಳಿಗೆ ಶ್ರೀ ಸತ್ಯಸಾಯಿ ಬಾಬಾರವರ ಪ್ರಸಾದ ರೂಪವಾಗಿ ಕುಟುಂಬಕ್ಕೆ ಬೇಕಾಗುವ 35 ವಸ್ತುಗಳ ಕಿಟ್‍ಗಳನ್ನು ವಿತರಿಸಲಾಯಿತು.

ನಂತರ ತಾ.ಪಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಜಿ ಗುನಗಿ ಮಾತನಾಡಿ, ನೆರೆ ಬಂದಾಗ ಇಲ್ಲಿಯ ಕೆಲವು ಭಾಗ ಸಂಪೂರ್ಣ ಜಲಾವೃತವಾಗಿ, ಅನೇಕರು ತೊಂದರೆಗೆ ಸಿಲುಕಿದ್ದರು. ಅತಿಯಾಗಿ ತೊಂದರೆಗೆ ಒಳಗಾದ ಸ್ವಲ್ಪ ಜನರಿಗಾದರೂ ಶ್ರೀ ಸಾಯಿಬಾಬಾರವರ ಪ್ರಸಾದ ರೂಪದಲ್ಲಿ ದಿನನಿತ್ಯಕ್ಕೆ ಬೇಕಾಗುವ ಕೆಲವು ವಸ್ತುಗಳನ್ನು ವಿತರಿಸಬೇಕು ಎಂದು ಎಲ್ಲ ಶ್ರೀ ಸಾಯಿಬಾಬಾ ಭಕ್ತರು ಸಂಕಲ್ಪ ಮಾಡಿ ಕೈಲಾದಷ್ಟು ನೆರವಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಾಲೂಕಿನ ಶ್ರೀ ಸಾಯಿಬಾಬಾ ಭಕ್ತರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.