ರೈತರಿಗೆ ಉಚಿತ ಹೈನುಗಾರಿಕಾ ತರಬೇತಿ

ಕಾರವಾರ: ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆಯಿಂದ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರಕನ್ನಡ ಜಿಲ್ಲೆಗಳ ರೈತರಿಗೆ ಮತ್ತು ಮಹಿಳಾ ರೈತರಿಗೆ ಮೂರು ದಿನ ಉಚಿತವಾಗಿ ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆಯ ತರಬೇತಿ ನೀಡಲಾಗುವುದು.

ಆಸಕ್ತರು ತಮ್ಮ ಹೆಸರನ್ನು ಎಸ್‍ಎಮ್‍ಎಸ್ ಅಥವಾ ಕಚೇರಿಯ ದೂರವಾಣಿ ಕರೆ ಮೂಲಕ ಅಥವಾ ಧಾರವಾಡದಲ್ಲಿರುವ ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದ ಕಚೇರಿಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 0836-2443743 ಅಥವಾ 9591024499 ನ್ನು ಸಂಪರ್ಕಿಸಬಹುದು ಎಂದು ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದ ಉಪ ನಿರ್ದೇಶಕರು ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.