ಕ್ರೀಡಾಕೂಟ: ರಕ್ಷಿತ್‍ಗೆ ವೀರಾಗ್ರಣಿ ಪ್ರಶಸ್ತಿ ಗರಿ


ಶಿರಸಿ: ಸ್ಥಳಿಯ ಲಾಯನ್ಸ ಮಾದರಿ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿ ರಕ್ಷಿತ್ ರವೀಂದ್ರ 17 ವರ್ಷ ವಯೋಮಿತಿ ಒಳಗಿನ ಶಿರಸಿ ತಾಲೂಕಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದಲ್ಲಿ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿರುವನು.

ಜಿಲ್ಲಾ ಪಂಚಾಯತ, ಶಿಕ್ಷಣ ಇಲಾಖೆ ಹಾಗೂ ಎಮ್.ಇ.ಎಸ್. ಆಂಗ್ಲ ಮಾಧ್ಯಮ ಪ್ರೌಢಶಾಲೆ ಆಶ್ರಯದಲ್ಲಿ ಇಂದು ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ತಾಲೂಕಾ ಮಟ್ಟದ ಕ್ರೀಡಾಕೂಟ ಜರುಗಿದವು. ಬಾಲಕರ ವಿಭಾಗದ 400 ಮೀ. ಓಟ, ಟ್ರಿಪಲ್ ಜಂಪ್ ಮತ್ತು 110 ಮೀ. ಹರ್ಡಲ್ಸ್‍ನಲ್ಲಿ ರಕ್ಷಿತ ರವೀಂದ್ರ ಪ್ರಥಮ ಬಹುಮಾನ ಪಡೆದು ಬಾಲಕರ ಸಮಗ್ರ ಚಾಂಪಿಯನ್ ಪ್ರಶಸ್ತಿಗೆ ಅರ್ಹತೆ ಪಡೆದಿದ್ದನೆ.

Categories: ಚಿತ್ರ ಸುದ್ದಿ

Leave A Reply

Your email address will not be published.