ಸಮಸ್ಯೆ ಅನುಭವಿಸುತ್ತಿದ್ದ ಜನತೆಗೆ ಸರಕಾರ ಶಕ್ತಿಮೀರಿ ಸಹಕಾರ ನೀಡುತ್ತಿದೆ: ಸಭಾಧ್ಯಕ್ಷ ಕಾಗೇರಿ

ಕಾರವಾರ: ಅತಿವೃಷ್ಠಿಯಿಂದ ಹಾನಿಯಾಗಿರುವ ರಾಜ್ಯದ ಜನತೆಗೆ ಸರಕಾರ ಶಕ್ತಿಮೀರಿ ಸಹಕಾರ ನೀಡುತ್ತಿದೆ. ಸರಕಾರದ ಜೊತೆಗೆ ಖಾಸಗಿ ಸಂಘ ಸಂಸ್ಥೆಯವರು ಸಹಾಯಕ್ಕೆ ಹಸ್ತ ಚಾಚಿರುವುದು ಸ್ವಾಗತಾರ್ಹ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಣಕೋಣ ಗ್ರಾಮದ ಶ್ರೀ ಸಾತೇರಿ ದೇವಿಯ ದರ್ಶನ ಪಡೆದು, ಬಳಿಕ ಕಾರವಾರದ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದ ಸಮಸ್ತ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಅತಿವೃಷ್ಠಿಯಿಂದ ರಾಜ್ಯದ ಜನರು ತೊಂದರೆ ಅನುಭವಿಸಿದ್ದಾರೆ. ರಾಜ್ಯ ಸರಕಾರ ಜನರ ತೊಂದರೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ಜಿಲ್ಲೆಯಲ್ಲಿ ಹಾನಿಯಾಗಿರುವ ಬಗ್ಗೆ ಸಮಗ್ರ ವರದಿಯನ್ನು ಎಲ್ಲ ಪ್ರಮುಖರಿಗೂ ನೀಡಲಾಗಿದೆ. ತಕ್ಷಣದ ಸ್ಪಂದನೆ ಲಭಿಸಿದೆ. ನಾನು ಆಯಾ ಶಾಸಕರು, ಜಿಲ್ಲಾಧಿಕಾರಿ, ಉಳಿದ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ಆಡಳಿತಾತ್ಮವಾಗಿ ಆಗಬೇಕಾದ ಕೆಲಸ ನನ್ನ ಗಮನಕ್ಕೆ ತಂದಿದ್ದಾರೆ. ಜನರ ಕಷ್ಟಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲ ಕ್ರಮವನ್ನು ಸರಕಾರ ಕೈಗೊಳ್ಳಲಿದೆ ಎಂದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.