ವಿಜೃಂಭಣೆಯಿಂದ ಜರುಗಿದ ಗಣೇಶ ವಿಸರ್ಜನಾ ಮೆರವಣಿಗೆ


ಮುಂಡಗೋಡ: ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ ಸಾರ್ವಜನಿಕಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ತುಂತುರು ಮಳೆಯ ನಡುವೆ ವಿಜೃಂಭಣೆಯಿಂದ ಜರುಗಿತು.
ಪಟ್ಟಣದ ಕಲಾಲ ಓಣಿ, ಪಾದಗಟ್ಟಿ, ಟಿ.ಎ.ಪಿ.ಸಿ.ಎಂ.ಎಸ್.ರೋಡ, ಹೊಸ ಓಣಿ ಮಿತ್ರ ಮಂಡಳಿ, ಕಂಬಾರಗಟ್ಟಿ, ನೆಹರು ನಗರ, ಗಾಂಧಿ ನಗರ ಮತ್ತು ಜೈ ಭೀಮ ಯುವಕ ಮಂಡಳಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಪ್ರತಿ ವರ್ಷದಂತೆ ಈ ಬಾರಿಯೂ ಬೆಳಗಿನ ಜಾವದವೆಗೆ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಡಿಜೆ ತಾಳಕ್ಕೆ ಸಾವಿರಾರು ಯುವಕರು ಮತ್ತು ವಯಸ್ಕರು ಮಳೆಯನ್ನೂ ಲೆಕ್ಕಿಸದೇ ಹುಚ್ಚೆದ್ದು ಕುಣಿಯುವ ದೃಶ್ಯಕಂಡು ಬಂದಿತು. ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕೋರ್ಟ್ ಸರ್ಕಲ್‍ನಿಂದ ಕಂಬಾರಗಟ್ಟಿ ಮತ್ತು ಗಾಂಧಿ ನಗರದ ವರೆಗೆ ಜನಮೂಹ ನೆರೆದು ಬಂದಿತ್ತು. ಬೆಳಗಿನ ಜಾವ ಧಾರ್ಮಿಕ ಪೂಜಾ ವಿಧಿ-ವಿಧಾನಗಳೊಂದಿಗೆ ಬಸವನ ಹೊಂಡದಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಸಾಂಗಗೊಂಡಿತು.

ಸಿ.ಪಿ.ಐ. ಶಿವಾನಂದ ಚಲವಾದಿ ಮತ್ತು ಪಿ.ಎಸ್.ಐ. ಪ್ರೇಮನಗೌಡ ಪಾಟೀಲ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.