ಮನೆಯಲ್ಲಿ ಅಕ್ರಮ ಸಾಗವಾನಿ ತುಂಡು ಸಂಗ್ರಹ: ಅರಣ್ಯ ಇಲಾಖೆ ವಶಕ್ಕೆ

ಮುಂಡಗೋಡ: ತಾಲೂಕಿನ ಕೆಂದಲಗೇರಿ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಸಾಗವಾನಿ ಮರಗಳನ್ನು ಕಡಿದು ತುಂಡು ಮಾಡಿ ದಾಸ್ತಾನು ಮಾಡಿದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ ಕಟ್ಟಿಗೆ ಸಮೇತ ಓರ್ವ ಆರೋಪಿಯನ್ನು ಬಂಧಿಸಿದ್ದು ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ಮಲಕಾಜಿ ನಿಂಗಪ್ಪ ಸಾಬಣ್ಣವರ ಎಂಬ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಮೋದಿನಸಾಬ ಹುಲಕೊಪ್ಪ, ನಬಿಸಾಬ ಅಮ್ಮಗಾಂವ, ಮಾಬುಲಿ ಅಮ್ಮಗಾಂವ ಎಂಬ ಮೂವರು ಆರೋಪಿಗಳುತಲೆ ಮರೆಸಿಕೊಂಡಿದ್ದಾರೆ.

ಈ ನಾಲ್ಕು ಆರೋಪಿಗಳು ಯರೇಬೈಲ್ ಅರಣ್ಯದಲ್ಲಿ ಸಾಗವಾನಿ ಮರಗಳನ್ನು ಕಡಿದು ಅಲ್ಲಿಯೇ ಚೌಕ ಪಟ್ಟಿಗಳನ್ನು ಮಾಡಿಕೊಂಡು ಬಂದು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆಡಿ.ಎಫ್.ಒ.ಆರ್.ಜಿ.ಭಟ್, ಎ.ಸಿ.ಎಫ್.ಎಸ್.ಎಂ.ವಾಲಿ ಮಾರ್ಗದರ್ಶನದಲ್ಲಿ ಆರ್.ಎಫ್.ಒ.ಸುರೇಶಕುಳ್ಳೊಳ್ಳಿ ನೇತೃತ್ವದಲ್ಲಿ ಸಿಬ್ಬಂದಿ ಯಾದಗೌಸ್ ಮುಲ್ಲಾ, ಬೋಜುಚವ್ಹಾಣ, ಶ್ರೀಕಾಂತ ವೆರ್ಣೇಕರ, ಬಸವರಾಜ ನಾಯ್ಕ ಮತ್ತು ಇತರರು ಕಾರ್ಯಾಚರಣೆಯಲ್ಲಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.