ಮನೆಗೆ ಹೊತ್ತಿಕೊಂಡ ಬೆಂಕಿ: ಅಪಾರ ಹಾನಿ

ಕುಮಟಾ: ತಾಲೂಕಿನ ಹೊಲನಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಹಣ್ಣೇಮಠದಲ್ಲಿ ಮಂಗಳವಾರ ತಡರಾತ್ರಿ ಮನೆಯೊಂದಕ್ಕೆ ಬೆಂಕಿ ಬಿದ್ದು, ತೀವ್ರ ಹಾನಿಯಾದ ಘಟನೆ ಸಂಭವಿಸಿದೆ.

ಹಣ್ಣೇಮಠದ ಜಟ್ಟಿ ಹನುಮಂತ ಪಟಗಾರ ಎಂಬವರ ಮನೆಯಲ್ಲಿ ಎಲ್ಲರೂ ನಿದ್ರೆಯಲ್ಲಿರುವಾಗ ಕೋಣೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹಬ್ಬತೊಡಗಿದೆ. ಹೊಗೆಗೆ ಉಸಿರು ಕಟ್ಟಿದಂತಾಗಿ ಎಚ್ಚರಗೊಂಡ ಮನೆ ಮಂದಿ ಮನೆಯಿಂದ ಹೊರಬಂದು ಸಹಾಯಕ್ಕಾಗಿ ಆಸುಪಾಸಿನವರತ್ತ ಕೂಗಿಕೊಂಡಿದ್ದಾರೆ. ನಂತರ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಕಷ್ಟಪಟ್ಟು ಬೆಂಕಿ ನಂದಿಸಿದ್ದರೂ ಮನೆಯೊಳಗಿನ ಅಗತ್ಯ ಸಾಮಗ್ರಿ, ಉಪಕರಣಗಳು ಸೇರಿದಂತೆ ಸಾಕಷ್ಟು ಹಾನಿಯಾಗಿದೆ. ಸ್ಥಳೀಯ ಪಂಚಾಯತದವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.