ಸಂಸ್ಥೆಯನ್ನು ಲಾಭದಲ್ಲಿ ಮುನ್ನಡೆಸುವುದು ಸವಾಲಿನ ಕಾರ್ಯ: ಪ್ರದೀಪ ನಾಯಕ


ಗೋಕರ್ಣ: ಗೋಕರ್ಣದಂತಹ ಸಣ್ಣ ಪ್ರದೇಶದಲ್ಲಿ 20ಕ್ಕೂ ಹೆಚ್ಚು ಸಹಕಾರಿ, ಸೌಹಾರ್ದ ಬ್ಯಾಂಕಗಳು ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರನ್ನು ತನ್ನತ್ತ ಸೆಳೆಯಲು ಸ್ಪರ್ಧೆಗಳು ಉಂಟಾಗಿದೆ. ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವುದು, ಹೆಚ್ಚಿನ ಬಡ್ಡಿ ನೀಡಿ ಠೇವಣಿ ಪಡೆಯವುದು ನಡೆಯುತ್ತಿದೆ. ಇದರ ಮಧ್ಯೆ ಸಂಸ್ಥೆಗಳನ್ನು ಲಾಭದತ್ತ ತೆಗೆದುಕೊಂಡು ಹೋಗುವುದು ಸವಾಲಿನ ಕೆಲಸ ಎಂದು ಜಿಂ. ಪಂ. ಸದಸ್ಯ ಜೆ.ಡಿ.ಎಸ್. ಮುಖಂಡ ಪ್ರದೀಪ ನಾಯಕ ಹೇಳಿದರು.

ಅವರು ಸೋಮವಾರ ಸಂಜೆ ಇಲ್ಲಿನ ವೆಂಕಟ್ರಮಣ ದೇವಾಲಯದ ಮಾಳಿಗೆ ಮೇಲೆ ನೂತನವಾಗಿ ಪ್ರಾರಂಭಗೊಂಡ ಕುಮಟಾ ಸಹಕಾರಿ ಕೃಷಿ ಮತ್ತು ಅಭಿವೃದ್ಧಿ ಬ್ಯಾಂಕ್‍ನ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಇಲ್ಲಿ ಆರಂಭಗೊಂಡ ಶಾಖೆಯು ಸಹ ಉತ್ತಮ ರೀತಿಯಲ್ಲಿ ಗ್ರಾಹಕರಿಗೆ ಸೇವೆ ಒದಗಿಸಲಿ ಎಂದು ಆಶಿಸಿದರು.

ಹಿರಿಯ ವೈದ್ಯ, ಸಾಮಾಜಿಕ ಕಾರ್ಯಕರ್ತ, ಸಹಕಾರಿ ಕ್ಷೇತ್ರದ ಅನುಭವಿ, ವೆಂಕಟರಮಣ ದೇವಾಲಯದ ಅರ್ಚಕ ಡಾ. ಎಸ್.ವಿ. ಜಠಾರ ಮಾತನಾಡಿ ಒಂದು ಕಾಲದಲ್ಲಿ ಸಿಂಡಿಕೇಟ್ ಬ್ಯಾಂಕ್, ನಂತರದಲ್ಲಿ ಅಂಚೆ ಕಛೇರಿ ಇದ್ದ ಈ ಜಾಗದಲ್ಲಿ ನೂತನ ಬ್ಯಾಂಕ್ ಶಾಖೆ ಆರಂಭವಾಗುತ್ತಿರುವುದು ಸಂತಸ ಈ ಹಿಂದ ಎಲ್ಲಾ ಸಂಸ್ಥೆಗಳು ಉತ್ತಮ ಕಾರ್ಯನಿರ್ವಹಿಸಿ ಅಭಿವೃದ್ದಿ ಹೊಂದಿ, ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಂತೆ ಸೋಮವಾರ ಆರಂಭಗೊಂಡ ಶಾಖೆಯೂ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.

ದೇವಾಲಯದ ಟ್ರಸ್ಟಿ ವೇ. ನಾರಾಯಣ ಉಮಾಶಿವ ಉಪಾಧ್ಯಾಯ ನೂತನ ಶಾಖೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ ನೂತನ ಶಾಖೆ ಗ್ರಾಹಕರಿಗೆ ಸಂತೃಪ್ತಿದಾಯಕ ಸೇವೆ ನೀಡಿ, ಗ್ರಾಹಕರೊಂದಿಗೆ ಬ್ಯಾಂಕ್ ಅಭಿವೃದ್ದಿ ಹೊಂದಲಿ ಎಂದು ಆರ್ಶಿವದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‍ನ ಅಧ್ಯಕ್ಷರಾದ ಭುವನ ಭಾಗ್ವತ್ ಮಾತನಾಡಿ ಜಿಲ್ಲೆಯಲ್ಲೆ ಸಾಲಾ ವಸೂಲಾತಿಯಲ್ಲಿ ಮುಂಜೂಣಿಯಲ್ಲಿರುವ ನಮ್ಮ ಬ್ಯಾಂಕ್, ನಮ್ಮಲ್ಲಿ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಾ ಉತ್ತಮ ಸೇವೆ ನೀಡುತ್ತಿದೆ. ನಮ್ಮ ಸಂಸ್ಥೆಯ ನಿರ್ದೇಶಕರು, ನೌಕರರು ನಾವು ಕುಟುಂಬ ಸದಸ್ಯರಂತೆ ಕೆಲಸ ಕಾರ್ಯನಿರ್ವಹಣೆ ಮಾಡುತ್ತಿರುವುದೇ ಯಶ್ವಸಿಗೆ ಕಾರಣವಾಗಿದ್ದು, ಇದೇ ರೀತಿ ಈ ಭಾಗದ ಜನರು ನಮ್ಮ ಸೇವೆಯನ್ನು ಪಡೆದು ಸಹಕರಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ, ಬ್ಯಾಂಕ್ ನ ಉಪಾಧ್ಯಕ್ಷ ನೀಲಕಂಠ ನಾಯಕ, ತಾಂ. ಪಂ. ಮಹೇಶ ಶೆಟ್ಟಿ, ಮಾಜಿ ತಾಂ. ಪಂ. ಸದಸ್ಯ ಜಿ.ಜಿ.ಹೆಗಡೆ, ಶ್ರೀಧರ ಭಾಗ್ವತ್, ಎಸ್.ವಿ.ಹೆಗಡೆ, ವಿ.ಪಿ.ಹೆಗಡೆ ಮುಂತಾದವರು ಉಪಸ್ಥಿತರಿದ್ದರು. ಶಾಖಾ ವ್ಯವಸ್ಥಾಪಕ ಶ್ರೀರಾಮ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.