ಚಿಗಳ್ಳಿ ಜಲಾಶಯಕ್ಕೆ ಹೆಚ್ಚುವರಿ ಎಸ್‍ಪಿ ಗೋಪಾಲಕೃಷ್ಣ ಬ್ಯಾಕೋಡ ಭೇಟಿ


ಮುಂಡಗೋಡ: ಕಳೆದ ಆರು ದಿನಗಳ ಹಿಂದೆ ಚಿಗಳ್ಳಿ ಜಲಾಶಯದ ಒಡ್ಡು ಒಡೆದು ಅಪಾರ ಹಾನಿಯಾಗಿತ್ತು. ಸಾರ್ವಜನಿಕರು ಪ್ರತಿಭಟಿಸಿ ಯಾರೋ ಅಪರಿಚಿತರು ಒಡ್ಡು ಒಡೆದಿದ್ದಾರೆ ಎಂದು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಶಂಕಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಚಿಗಳ್ಳಿ ಜಲಾಶಯಕ್ಕೆ ಹೆಚ್ಚುವರಿ ಎಸ್‍ಪಿ ಗೋಪಾಲಕೃಷ್ಣ ಬ್ಯಾಕೋಡ ಅವರು ರವಿವಾರ ಸಂಜೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯ ಸಿಪಿಐ ಶಿವಾನಂದ ಚಲವಾದಿ ಅವರಿಂದ ಮಾಹಿತಿ ಪಡೆದುಕೊಂಡರು.

Categories: ಚಿತ್ರ ಸುದ್ದಿ

Leave A Reply

Your email address will not be published.