ಕದ್ರಾ ನೆರೆ ಸಂತ್ರಸ್ತರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನಿಂದ ಪರಿಹಾರ ಸಾಮಗ್ರಿ ವಿತರಣೆ


ಶಿರಸಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿರಸಿಯ ವತಿಯಿಂದ ನೇರ ಸಂತ್ರಸ್ತರಿಗೆ ಸಹಾಯ ಹಸ್ತ ಹಾಗು ಪರಿಹಾರ ಸಾಮಗ್ರಿ ಪೂರೈಕೆ ಕಾರ್ಯ ನಡೆಯಿತು. 27,805 ಹಣ ಹಾಗು ಉಪಯುಕ್ತ ವಸ್ತುಗಳನ್ನು ಒಟ್ಟು ಗೂಡಿಸಿ ಕದ್ರಾ ಗ್ರಾಮದ ಸಂತ್ರಸ್ತರಿಗೆ ವಿತರಿಸಲಾಯಿತು. ‌

ನಗರದ ಮಾರ್ಕೇಟ್, ಸಿ.ಪಿ ಬಜಾರ ನಟರಾಜ್ ರೋಡ್ ಗಳಲ್ಲಿ ಹಣ ಹಾಗೂ ವಸ್ತುಗಳ ಸಂಗ್ರಹ ಮಾಡಿ, ದಿನ ಬಳಕೆಯ ಹೊದಿಕೆ, ಟವೆಲ್, ಪಂಚೆ, ಒಳಉಡುಪು, ನೀರಿನ ಬಾಟಲ್, ಬ್ರೇಶ್ ,ಪೇಸ್ಟ್ , ಸೋಪ, ಹಾಲಿನ ಪುಡಿ, ಸಕ್ಕರೆ, ಚಾಪುಡಿ, ಬ್ರೆಡ್, ಬಿಸ್ಕೆಟ್, ಸೊಳ್ಳೆ ಬತ್ತಿ, ಬೆಂಕಿ ಪಟ್ಟಣ ಮುಂತಾದವುಗಳನ್ನು ಕಾರವಾರದ ಕದ್ರಾ ಗ್ರಾಮಗಳಲ್ಲಿ ಸಂತ್ರಸ್ತರಿಗೆ ನೀಡಲಾಯಿತು.

ಈ ವೇಳೆ ಸಂತ್ರಸ್ತರು ತಮ್ಮ ಕರಾಳ ಅನುಭವ ಹಂಚಿಕೊಂಡು, ಬೆಳಿಗ್ಗೆ ತಿಂಡಿ ತಿನ್ನುತ್ತಿರುವಾಗ ಡ್ಯಾಮ್ ನೀರು ಬಿಟ್ಟಿದ್ದು, ನೀರಿನ ರಭಸಕ್ಕೆ ಮನೆಗಳೆಲ್ಲ ನೀರು ಪಾಲಾಗಿ ಮನೆಗಳು ನೆಲ ಸಮವಾಗಿದೆ. ಮನೆಯಲ್ಲಿರುವ ಪಾತ್ರೆ, ಬಟ್ಟೆ ಅನೇಕ ಸಾಮಗ್ರಿಗಳು ನೀರಿನ ಪಾಲಾಗಿದೆ. ಯಾವುದು ಬಟ್ಟೆ ಇಲ್ಲದೆ ಗಂಜಿ ಕೇಂದ್ರದಲ್ಲಿದ್ದೇವೆ. ನಮ್ಮ ಮುಂದಿನ ಜೀವನ ನೆನಸಿಕೊಂಡರೆ ಭಯವಾಗುತ್ತೆ ನಮ್ಮ ಮನೆ ಕಟ್ಟಲಿಕ್ಕೆ ಸರ್ಕಾರ ದವರು ಸಹಾಯ ಮಾಡಿದರೆ ಸಾಕು ಎಂದು ಕಣ್ಣಲ್ಲಿ ನೀರು ಹಾಕುವುದು ಕಂಡು ಬಂದಿತು.

ಗಂಜಿ ಕೇಂದ್ರದಲ್ಲಿ 1200 ಜನರಿದ್ದು, ಅವರೊಂದಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಾ ಇರಲಿದೆ ಎಂದು ಸಂಘಟನೆ ಪ್ರಮುಖರು ಧೈರ್ಯ ತುಂಬಿದರು. ನಗರ ಸಂಘಟನಾ ಕಾರ್ಯದರ್ಶಿ ಶಿವಕಾಂತ,ಶಿರಸಿ ಜಿಲ್ಲಾ ಸಂಚಾಲಕ ಕಮಲಾಕರ್ ಮರಾಠಿ, ಕಾರ್ಯಕರ್ತರಾದ ಶ್ರೀಧರ, ಗುರುರಾಜ್, ವಿಜಯ್, ಪ್ರಶಾಂತ್, ಮದನ್ ಭಟ್ ,ಸುಬ್ರಹ್ಮಣ್ಯ, ಸಂದೀಪ್, ಅರುಣ, ಸತೀಶ್, ದೀಪಕ್ ಕುಸುಮಾಕರ ನಾಯ್ಕ, ರಾಘು ಕುಂದರಗಿ ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.