ಒಡೆಯುವ ಭೀತಿಯಲ್ಲಿ ಸನವಳ್ಳಿ ಜಲಾಶಯ: ನೀರು ಹರಿದು ಹೋಗಲು ಜೆಸಿಬಿ ಕಾರ್ಯಾಚರಣೆ


ಮುಂಡಗೋಡ: ಕೆಲವು ದಿನಗಳ ಹಿಂದೆ ಅತಿ ವಿಸ್ತಾರವಾದ ಬೃಹತ್ತಾಕಾರದ ಸನವಳ್ಳಿ ಜಲಾಶಯದ ಜಾಕವೆಲ್ ಬಳಿ ಭೂಕುಸಿತ ಉಂಟಾಗಿ ಒಡ್ಡಿನ ಕೆಳ ಭಾಗದಲ್ಲಿ ಮೂರು ರಂಧ್ರಗಳಿಂದ ನೀರು ಹರಿದುಹೋಗುತ್ತಿದೆ. ಆದರಿಂದ ಸನವಳ್ಳಿ ಜಲಾಶಯ ಒಡ್ಡು ಒಡೆಯುವ ಭೀತಿಯಲ್ಲಿ ಸನವಳ್ಳಿ ಗ್ರಾಮಸ್ಥರು ಸುಮಾರು 40-50 ಯುವಕರ ತಂಡ ರಾತ್ರಿ ಹಗಲೇನ್ನದೆ ಜಲಾಶಯದಿಂದ ನೀರು ಹೊರ ಹೋಗಲು ಜೆಸಿಪಿ ಮುಖಾಂತರ ಕಾಲುವೆ ನಿರ್ಮಿಸಿ ಜಲಾಶಯದಿಂದ ನೀರನ್ನು ಹೊರಹಾಕುತ್ತಿದ್ದಾರೆ.

ಸನವಳ್ಳಿ ಗ್ರಾಮದ ಜಲಾಶಯದಿಂದ ಹತ್ತಿರ ಇರುವ ಮಾಲಿಂಗ ಶೆಟ್ಟಿ ಎಂಬುವರ ಬೃಹತ್ ಗಾತ್ರದ ಕೆರೆ ಒಡೆದಿರುವದರಿಂದ ಆ ಕೆರೆಯ ನೀರಿನ ಪ್ರಮಾಣ ಹೆಚ್ಚಾಗಿ ಈ ಜಲಾಶಕ್ಕೆ ಬರುತ್ತಿದ್ದು ಇದರಿಂದ ಒಡ್ಡು ಒಡೆಯುವ ಸಂಭವವಿದ್ದು ಗ್ರಾಮಸ್ಥರು ಅಧಿಕಾರಗಳ ಜೊತೆ ಚರ್ಚಿಸಿ ಡ್ಯಾಂ ನಿಂದ ನೀರು ಹೊರ ಹೋಗಲು ಯಂತ್ರಗಳ ಮೂಲಕ ಕಾಲುವೆ ತೆಗೆಸಿದ್ದಾರೆ.

ತಾಲೂಕಿನ ಬಾಚಣಕಿ ಮತ್ತು ಮಳಗಿ ಧರ್ಮಾಜಲಾಶಯ ಈ ಎರಡನ್ನು ಹೋರತು ಪಡಿಸಿ ಉಳಿದೆಲ್ಲಾ ಜಲಾಶಯಗಳು ಅಪಾಯದ ಅಂಚಿನಲ್ಲಿದ್ದರು ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.