ಅಜಾಗೃತೆಯ ಬೈಕ್ ಚಾಲನೆ: ಸವಾರ ಸಾವು

ಶಿರಸಿ: ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿ ಟೆಂಪೋಗೆ ಗುದ್ದಿದ ಪರಿಣಾಮವಾಗಿ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಜಾಗ್ನಳ್ಳಿ ಬಳಿ ನಡೆದಿದೆ.

ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದ ಸರನಕೈ ಗ್ರಾಮದ ನಾಗರಾಜ ನಾಯ್ಕ (30) ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಈತ ಸಿದ್ದಾಪುರ ಕಡೆಯಿಂದ ಶಿರಸಿಗೆ ಬರುವಾಗ ತೀರಾ ನಿರ್ಲಕ್ಷದಿಂದ ಚಾಲನೆ ಮಾಡಿ ಬಲಬದಿಗೆ ಹೋಗಿ ಟೆಂಪೋಗೆ ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ. ತಕ್ಷಣವೇ ಬೈಕ್ ಸವಾರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಚೇತರಿಸಿಕೊಳ್ಳದೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Categories: ಜಿಲ್ಲಾ ಸುದ್ದಿ

Leave A Reply

Your email address will not be published.