ಸುವಿಚಾರ

ಅಶ್ವಪ್ಲವಂ ಚಾಂಬುದಗರ್ಜನಂ ಚ ಸ್ತ್ರೀಣಾಂ ಚ ಚಿತ್ತಂ ಪುರುಷಸ್ಯ ಭಾಗ್ಯಂ
ಅವರ್ಷಣಂಚಾಪ್ಯತಿವರ್ಷಣಂ ಚ ದೇವೋ ನ ಜಾನಾತಿ ಕುತೋ ಮನುಷ್ಯಃ ||

ಕುದುರೆಯ ಓಟದ ಗತಿಯನ್ನೂ, ಮೋಡಗಳ ಗರ್ಜನೆಯನ್ನೂ, ಹೆಂಗಳೆಯರ ಮನಸನ್ನೂ, ಪುರುಷನ ಭಾಗ್ಯವನ್ನೂ, ಮಳೆಯಿಲ್ಲದಿರುವಿಕೆಯನ್ನೂ, ಅತಿ ಮಳೆಯಾಗುವಿಕೆಯನ್ನೂ – ಸ್ವತಃ ದೇವರೇ ಅರಿಯಲಾರನು, ಇನ್ನು ಮನುಷ್ಯನೇನು ಅರಿತಾನು? ಜಗತ್ತಿನಲ್ಲಿ ಅತ್ಯಂತ ಅನೂಹ್ಯವಾದ ಸಂಗತಿಗಳನ್ನು ಸುಭಾಷಿತಕಾರ ಇಲ್ಲಿ ಪಟ್ಟಿಮಾಡಿದ್ದಾನೆ. ನಿರಂತರ ಪ್ರಯತ್ನಶೀಲನಾದ ಒಬ್ಬ ಪುರುಷ ಇವತ್ತು ಪರಿಸ್ಥಿತಿಯ ಕಾರಣದಿಂದ ಬಡವನಾಗಿದ್ದರೂ ನಾಳೆ ಪ್ರಯತ್ನದಿಂದಾಗಿಯೂ ಭಾಗ್ಯಬಲದಿಂದಾಗಿಯೂ ಅತ್ಯುನ್ನತನಾಗಿ ಬೆಳೆಯಬಲ್ಲ. ಅದನ್ನು ಯಾರೂ ಊಹಿಸಲಾರದು. ಹಾಗೇ, ಚಂಚಲತೆಗೆ ಸ್ತ್ರೀಯ ಚಿತ್ತವೇ ಮಾನಕವಾಗಿಯೂ ಬಳಕೆಯಲ್ಲಿದೆ. ಸ್ವಭಾವ ಮಧುರರಾದ ಹೆಂಗಳೆಯರು ಚಿತ್ತ ಚಾಂಚಲ್ಯದ ಕಾರಣದಿಂದ ರಾಮಾಯಣ ಮಹಾಭಾರತಗಳನ್ನು ಸೃಷ್ಟಿಸಿದ್ದಾರಷ್ಟೆ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.