ಸುಭದ್ರ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಕ್ರೀಡಾಸಕ್ತಿ ಸಹಕಾರಿ: ಪ್ರೊ ಜಿ.ಡಿ.ಭಟ್


ಕುಮಟಾ: ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರಥಮ ಚಿಕಿತ್ಸೆ ಬಗೆಗೆ ಮಾಹಿತಿಯನ್ನು ಹೊಂದಿರುವುದರಿಂದ ತುರ್ತು ಸಂದರ್ಭದಲ್ಲಿ ಸಹಾಯ ಮಾಡಬಹುದಾಗಿದೆ. ಅದೇ ರೀತಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವದರಿಂದ ಸುಭದ್ರ ಸಮಾಜ ಕಟ್ಟಲು ಸಹಾಯವಾಗುತ್ತದೆ ಎಂದು ಪ್ರೊ ಜಿ.ಡಿ.ಭಟ್ ಅಭಿಪ್ರಾಯಪಟ್ಟರು.

ಡಾ. ಎ. ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಲೇಡಿಸ್ ಸೆಲ್ ಹಾಗೂ ಸ್ಕೌಟ್ ಎಂಡ್ ಗೈಡ್ಸ್ ಘಟಕದ ವತಿಯಿಂದ ನಡೆದ ಕಾನೂನು ಜಾಗೃತಿ ಹಾಗೂ ಪ್ರಥಮ ಚಿಕಿತ್ಸೆ ಕಾರ್ಯಕ್ರಮದಲ್ಲಿ ಅವರು ಪ್ರಥಮ ಚಿಕಿತ್ಸೆಯ ಉಪನ್ಯಾಸ ನೀಡಿದರು.

ಪ್ರೊ. ಸಂತೋಷ ಶಾನಭಾಗ ಕಾನೂನು ಜಾಗೃತಿ ಉಪನ್ಯಾಸ ನೀಡಿ, ಮೂಲಭೂತ ಹಕ್ಕುಗಳ ಬಗ್ಗೆ ಪ್ರತಿಯೊಬ್ಬ ನಾಗರಿಕರೂ ಅರಿತಿರಬೇಕು. ಕಾನೂನು ತಿಳುವಳಿಕೆಯಿಂದ ಸಮಾಜದಲ್ಲಿ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲು ಅನೂಕೂಲವಾಗಿರುತ್ತದೆ. ಸಾಮಾನ್ಯರು ಕಾನೂನು ತಿಳುವಳಿಕೆ ಪಡೆಯುವದರಿಂದ ಕಾನೂನು ಅಪರಾಧಗಳು ಕಡಿಮೆಯಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಎಸ್.ವಿ.ಶೇಣ್ವಿ ವಹಿಸಿದ್ದರು. ವೇದಿಕೆಯಲ್ಲಿ ಡಾ. ಅರವಿಂದ ನಾಯಕ, ಸ್ಕೌಟ್ ರೋವರ್ ಲೀಡರ್ ಪ್ರೊ. ಶಿವಾನಂದ ಬುಳ್ಳಾ, ಲೇಡಿಸ್ ಸೆಲ್ ಚೇರಮನ್ ಪ್ರೊ. ವೆಲನ್ಸಿಯಾ ಉಪಸ್ಥಿತರಿದ್ದರು. ಯೋಗಿನಿ ಭಂಡಾರಕರ್ ಸ್ವಾಗತಿಸಿದರು. ಸಂಗೀತಾ ಬಸ್ರೂರ್ ಕಾರ್ಯಕ್ರಮ ನಿರ್ವºಹಿಸಿದರು. ಉರ್ಜಾ ಶೇಟ್ ವಂದಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.