ಕಾರವಾರದಲ್ಲಿ ಕರಾಟೆ ಪಟುಗಳಿಗೆ ಬ್ಲ್ಯಾಕ್ ಬೆಲ್ಟ್ ಪ್ರದಾನ ಸಮಾರಂಭ

ಕಾರವಾರ: ಯಿನ್- ಯಾಂಗ್ ಇಂಟರ್‍ನ್ಯಾಷನಲ್ ಮಾರ್ಷಲ್ ಆರ್ಟ್ ಕರಾಟೆ(ಶೋಟೋಕಾನ್) ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕರಾಟೆ ಬ್ಲ್ಯಾಕ್ ಬೆಲ್ಟ್ ವಿತರಣಾ ಸಮಾರಂಭವು ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆಯಿತು.

ಕರಾಟೆ ಶಿಕ್ಷಣ ಸಂಸ್ಥೆಯ ಕಿಯೋಶಿ (ಪ್ರಧಾನ ಶಿಕ್ಷಕ) ಸಿ. ರಾಜನ್ ಅವರು ಕರಾಟೆ ವಿದ್ಯಾರ್ಥಿಗಳಾದ ಇಶಾಂತ್ ಕೆ., ಜಾನ್ವಿ ಜೆ. ಚೆಂಡೆಕರ್, ಝಾನ್ಸಿ ಜೆ. ಚೆಂಡೆಕರ್, ಅಲನ್ ಸಾಜು, ಹೆಲೆನ್ ಸಾಜು, ಸಾತ್ವಿಕ್ ಎಸ್. ಶಿರೋಡಕರ್, ಸುಮಂತ್ ಎಸ್. ಎಂ. ಅವರಿಗೆ ಬ್ಲ್ಯಾಕ್ ಬೆಲ್ಟ್ ಪ್ರದಾನ ಮಾಡಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆಯುವ ಕರಾಟೆ ತರಬೇತಿ ಶಾಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಬ್ಲ್ಯಾಕ್ ಬೆಲ್ಟ್ ಪಡೆದ ವಿದ್ಯಾರ್ಥಿಗಳಿಗೆ ಪ್ರಧಾನ ಶಿಕ್ಷಕ ಸಿ. ರಾಜನ್ ಅವರು ಕರಾಟೆ ತರಬೇತಿಯನ್ನು ನೀಡಿದ್ದಾರೆ. ಅವರ ಸತತ ಪ್ರಯತ್ನದಿಂದಾಗಿ ಇಲ್ಲಿನ ಶೋಟೋಕಾನ್ ಕರಾಟೆ ಶಾಲೆಯ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಸ್ಪರ್ಧಿಸಿ ಉತ್ತಮ ಸಾಧನೆ ಸಹ ಮಾಡಿದ್ದಾರೆ.

ಬ್ಲ್ಯಾಕ್ ಬೆಲ್ಟ್ ಪ್ರದಾನ ಸಮಾರಂಭದಲ್ಲಿ ಕರಾಟೆ ಸಹ ಶಿಕ್ಷಕರಾದ ಜೀವನ ಶೇಣ್ವಿ, ದಿಲೀಪ್ ನಾಯ್ಕ, ವಿಘ್ನೇಶ್ವರ್ ಭಟ್, ಸಂದೀಪ ಶೆಟ್ಟಿ, ಯಮಿನ್ ದರಲಾಮಿ, ಅರ್ಜುನ್ ನಾಯರ್, ವಿದ್ಯಾರ್ಥಿಗಳ ಪಾಲಕರು ಹಾಗೂ ಇನ್ನಿತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.