ಗುಡುಗು ಸಹಿತ ಧಾರಕಾರ ಮಳೆ: ಮನೆ ಗೋಡೆ ಕುಸಿತ

ಹೊನ್ನಾವರ: ಪಟ್ಟಣಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆ ಮತ್ತು ಗುಡುಗಿನ ಪರಿಣಾಮ ಇಲ್ಲಿನ ಮಸೀದಿ ರಸ್ತೆಯ ಸಮೀಪ ಎರಡು ಮನೆಗಳ ಹೊರಗೋಡೆ ಕುಸಿದು ಹಾನಿ ಸಂಭವಿಸಿದೆ.

ನಜಿರ್ ಹಜರತ್ ಸಾಬ್ ಮತ್ತು ಅಹಮದ್ ಫಕೀರ್ ಅವರ ಮನೆಯ ಗೋಡೆ ಸಂಪೂರ್ಣ ಕುಸಿದಿದ್ದು, ಗೋಡೆಯಿದ್ದ ಜಾಗವು ಹೊಂಡವಾಗಿ ಮಾರ್ಪಟ್ಟಿದ್ದೆ. ಸಿಡಿಲ ಹೊಡೆತಕ್ಕೆ ಮನೆಯ ಪಕ್ಕದಲ್ಲೇ ಇರುವ ಬಾವಿಯು ಕುಸಿದಿರುವುದರಿಂದ ಅದರ ಕಂಪನಕ್ಕೆ ಮನೆಯ ಗೋಡೆ ಕುಸಿದಿದೆ ಎನ್ನಲಾಗಿದೆ. ಮನೆಯೊಳಗಿದ್ದ ವಾಷಿಂಗ್ ಮಷಿನ್ ಮತ್ತು ನೀರೆತ್ತುವ ಯಂತ್ರ ಬಾವಿಯೊಳಗೆ ಬಿದ್ದಿವೆ. ಸ್ಥಳಕ್ಕೆ ತಹಶೀಲ್ದಾರ ವಿ.ಆರ್.ಗೌಡ ಹಾಗೂ ಪಟ್ಟಣ ಪಂಚಾಯತಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು ರೂ 45 ಸಾವಿರ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.