ಸುವಿಚಾರ

ಕ್ವಚಿದ್ಭೂಮೌ ಶಯ್ಯಾ ಕ್ವಚಿದಪಿ ಚ ಪರ್ಯಂಕಶಯನಂ
ಕ್ವಚಿಚ್ಛಾಕಾಹಾರೀ ಕ್ವಚಿದಪಿ ಚ ಶಾಲ್ಯೋದನರುಚಿಃ |
ಕ್ವಚಿತ್ಕಂಥಾಧಾರೀ ಕ್ವಚಿದಪಿ ಚ ದಿವ್ಯಾಂಬರಧರೋ
ಮನಸ್ವೀ ಕಾರ್ಯಾರ್ಥೀ ನ ಗಣಯತಿ ದುಃಖಂ ನ ಚ ಸುಖಮ್ ||
ಕೆಲವೊಮ್ಮೆ ಭೂಮಿಯೇ ಹಾಸಿಗೆ, ಇನ್ನು ಕೆಲವೊಮ್ಮೆ ಮೆತ್ತನೆಯ ಸುಪ್ಪತ್ತಿಗೆ, ಹಲವೊಮ್ಮೆ ಬರಿಯ ಕಂದಮೂಲಗಳೂಟ, ಮತ್ತೊಮ್ಮೆ ಸೊಗಸಾಗಿ ಬೇಯಿಸಿದ ಶಾಲ್ಯೋದನದೊಸಗೆ, ಒಮ್ಮೊಮ್ಮೆ ಹಳೆಯುಡುಗೆ, ಮಗದೊಮ್ಮೆ ದಿವ್ಯವಸ್ತ್ರಗಳುಡುಗೆ – ಹೀಗೆ ಬದುಕಿನಲ್ಲಿ ದಿನಗಳು ಒಂದೊಂದು ಬಾರಿಗೆ ಒಂದೊಂದು ಬಗೆಯದಾಗಿದ್ದರೂ, ಅವು ಪರಸ್ಪರ ವಿರುದ್ಧವಾದ ಕೊಡುಗೆಗಳನ್ನು ಕೊಡಮಾಡುತ್ತಿದ್ದರೂ ಮನಸ್ವಿಯಾದ ಕಾರ್ಯಕರ್ತನು ದುಃಖವನ್ನಾಗಲೀ ಸುಖವನ್ನಾಗಲೀ ಲೆಕ್ಕಿಸದೆ ತನ್ನ ಕಾರ್ಯಸಾಧನೆಯೊಂದನ್ನು ಮಾತ್ರವೇ ಲಕ್ಷ್ಯವಾಗಿರಿಸಿಕೊಳ್ಳುತ್ತಾನೆ. ಗಮ್ಯದ ಸಾಧನೆಗೆ ಹೊರಟವನಿಗೆ ಮಾರ್ಗದ ಸೊಗವಾಗಲೀ ಕಷ್ಟಗಳಾಗಲೀ ಲೆಕ್ಕಕ್ಕಿರಲಾರವು.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.