ಪುಷ್ಪಗುಚ್ಛ ತಯಾರಿಕೆ ಒಂದು ಉತ್ತಮ ಕಲೆ: ಆಶಾಚಂದ್ರ

ಕುಮಟಾ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಡಿಯಲ್ಲಿ ಬರುವಂತಹ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ತಾಲೂಕಿನ ಊರಕೇರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳೆಯರಿಗಾಗಿ ಪುಷ್ಪಗುಚ್ಛ ತಯಾರಿಸುವ ಸ್ಫರ್ಧೆಯನ್ನು ಆಯೋಜಿಸಲಾಗಿತ್ತು.

ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಸಮನ್ವಯಧಿಕಾರಿ ಆಶಾಚಂದ್ರ ಮಾತನಾಡಿ, ಪುಷ್ಪಗುಚ್ಛ ತಯಾರಿಸುವುದು ಒಂದು ಉತ್ತಮ ರೀತಿಯ ಕಲೆ. ಪ್ರತಿಯೊಬ್ಬನಲ್ಲೂ ಒಂದೊಂದು ರೀತಿಯ ಉತ್ತಮ ಕಲೆ ಅಡಗಿರುತ್ತದೆ. ಆದರೆ ಸರಿಯಾದ ವೇದಿಕೆಯ ಕೊರತೆಯಿಂದ ಅದನ್ನು ಪ್ರದರ್ಶಿಸಲು ಸಾಧ್ಯವಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮಹಿಳೆಯರಿಗಾಗಿ ಇಂತಹ ವೇದಿಕೆಯನ್ನು ಕಲ್ಪಿಸುತ್ತಿದೆ. ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಐಶ್ವರ್ಯ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದು, ಪುಷ್ಪಗುಚ್ಛ ತಯಾರಿಸುವ ಸ್ಫರ್ಧೆಯನ್ನು ನಡೆಸಿದರು. ಪ್ರಾರಂಭದಲ್ಲಿ ಸೇವಾಪ್ರತಿನಿಧಿ ಕಲ್ಪನಾ ಸ್ವಾಗತಿಸಿದರು. ಸುಮನಾ ಹೆಗಡೆ ವಂದಿಸಿದರು. ಜ್ಞಾನ ವಿಕಾಸ ಕೇಂದ್ರದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.