ಅನ್ನದಿಂದ ಮಾಡಿ ನೋಡಿ ರುಚಿ- ರುಚಿ ಥಾಲಿಪಟ್ಟು


ಅಡುಗೆ ಮನೆ: ಅನ್ನ ವೇಸ್ಟ್ ಮಾಡೋದು ಅಂದ್ರೆ ಯಾರಿಗೆ ಆದ್ರೂ ಬೇಜಾರ್ ಆಗುತ್ತೆ. ರಾತ್ರಿ ಉಳಿದ ಅನ್ನದಿಂದ ಬೆಳಿಗ್ಗೆ ಚಿತ್ರಾನ್ನ, ಪುಳಿಯೋಗರೆ ಇತರೆ ಯವುದೇ ಉಪಹಾರ ಮಾಡಿ ತಿನ್ನಲು ಬೇಜಾರೇ. ಹಾಗಾಗಿ ಉಳಿದ ಅನ್ನ ಮತ್ತೇನು ಮಾಡಬೇಕು ಅನ್ನೋದೆ ತಲೆನೋವು. ಹಾಗಿದ್ದರೆ ರುಚಿ ರುಚಿಯಾದ ಥಾಲಿಪಟ್ಟು ತಯಾರಿಸಿ ನೋಡಿ.

ಬೇಕಾಗುವ ಸಾಮಗ್ರಿಗಳು: ಅನ್ನ 1 ಕಪ್, ಅಕ್ಕಿ ಹಿಟ್ಟು 1/2 ಕಪ್, ಮೈದಾ ಹಿಟ್ಟು 1/4 ಕಪ್, ಹೆಚ್ಚಿದ ಈರುಳ್ಳಿ 2, ಹೆಚ್ಚಿದ ಟೊಮೆಟೋ 1, ಹೆಚ್ಚಿದ ಕರಿಬೇವು ಸ್ವಲ್ಪ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ಹೆಚ್ಚಿದ ಹಸಿಮೆಣಸು 2, ತುರಿದ ಕ್ಯಾರೆಟ್ 1, ತುರಿದ ಶುಂಠಿ 1 ಇಂಚು, ಉಪ್ಪು ರುಚಿಗೆ, ತುಪ್ಪ ಸ್ವಲ್ಪ

ಮಾಡುವ ವಿಧಾನ: ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಚೆನ್ನಾಗಿ ಸ್ಮ್ಯಾಶ್ ಮಾಡಿರುವ ಅನ್ನ, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಈರುಳ್ಳಿ, ಹೆಚ್ಚಿದ ಟೊಮೆಟೋ, ಕ್ಯಾರಟ್, ಉಪ್ಪು, ಶುಂಠಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವು ಎಲ್ಲವನ್ನೂ ಹಾಕಿ ಅಗತ್ಯವಿದ್ದರೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

ಮಧ್ಯಮ ಗಾತ್ರದ ಉಂಡೆಯನ್ನಾಗಿ ಮಾಡಿ ಅದನ್ನು ರೊಟ್ಟಿಯ ಆಕಾರಕ್ಕೆ ತಟ್ಟಬೇಕು. ಕಾದ ಕಾವಲಿಯ ಮೇಲೆ ಹಾಕಿ ಒಂದು ಚಮಚ ತುಪ್ಪವನ್ನು ಸವರಿ ಬೇಯಿಸಿದರೆ ಥಾಲಿಪಟ್ಟು ರೆಡಿ.

Categories: ಅಡುಗೆ ಮನೆ

Leave A Reply

Your email address will not be published.