ಒಮ್ಮೆ ಸವಿದು ನೋಡಿ ಸೋರೆಕಾಯಿ ಪಾಯಸ..


ಅಡುಗೆ ಮನೆ: ಮನೆಯಲ್ಲಿ ಹಬ್ಬವೆಂದರೆ ಸಿಹಿ ಪದಾರ್ಥದಲ್ಲಿ ಪಾಯಸ ಒಂದಾಗಿ ಬಿಟ್ಟಿರುತ್ತೆ, ಪಾಯಸವಿಲ್ಲದೆ ಹಬ್ಬವಿಲ್ಲ ಎನ್ನುವ ವಾತಾವರಣ ಸಾಧಾರಣ ಎಲ್ಲೆಡೆ ಸಹಜವೇ. ಅದೇ ರೀತಿ ಯಾವುದಾದರೂ ಹಬ್ಬಕ್ಕೆ ಸೋರೆಕಾಯಿ ಪಾಯಸ ಮಾಡಿ ಸವಿದು ನೊಡಿ

ಪಾಯಸಕ್ಕೆ ಬೇಕಾಗುವ ಸಾಮಗ್ರಿಗಳು: ಒಂದು ಚಿಕ್ಕ ಸೋರೆಕಾಯಿ, ಸಕ್ಕರೆ ಅಥವಾ ಬೆಲ್ಲ ಸಿಹಿಗೆ ತಕ್ಕಷ್ಟು, ತೆಂಗಿನಕಾಯಿ ತುರಿ 1 ಕಪ್, ಏಲಕ್ಕಿ-2 ರಿಂದ 3, ಹಾಲು -1 ಕಪ್. ಅಲಂಕಾರಕ್ಕೆ ಗೋಡಂಬಿ, ಪಿಸ್ತಾ, ಬಾದಾಮಿ.

ಮಾಡುವ ವಿಧಾನ: ಸೋರೆಕಾಯಿಯನ್ನು ಸಿಪ್ಪೆ ತೆಗೆದು ಅದನ್ನ ಹೆಚ್ಚಿ ಕುಕ್ಕರಿನಲ್ಲಿ ಬೇಯಿಸಿ, ತಣ್ಣಗಾಗುವವರೆಗೂ ಬಿಡಿ. ಬಳಿಕ ಮಿಕ್ಸಿಗೆ ಹಾಕಿ ರುಬ್ಬಿಟ್ಟುಕೊಳ್ಳಿ. ಇನ್ನೊಂದು ಕಡೆ ತೆಂಗಿನಕಾಯಿ ತುರಿಯನ್ನೂ ನುಣ್ಣಗೆ ರುಬ್ಬಿ. ಪಾತ್ರೆಯಲ್ಲಿ ರುಬ್ಬಿದ ಸೋರೆಕಾಯಿ, ತೆಂಗಿನ ತುರಿ, ಹಾಲು ಹಾಕಿ ಕುದಿಸಿ. ಒಂದು ಕುದಿಯ ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಹಾಕಿ ಮತ್ತೊಮ್ಮೆ ಕುದಿಸಿ, ಏಲಕ್ಕಿ ಪುಡಿ ಸೇರಿಸಿ. ಬಿಸಿ ಬಿಸಿಯಾದ ಸೋರೆಕಾಯಿ ಪಾಯಸ ಸವಿದು ನೋಡಿ.

Categories: ಅಡುಗೆ ಮನೆ

Leave A Reply

Your email address will not be published.