ವಿವಿಧ ಪ್ರಯೋಜನ ಪಡೆದ ಕಲಾವಿದರ ವಿವರ ಅಪ್ಲೋಡ್ ಮಾಡಲು ಮಾಹಿತಿ ಸಲ್ಲಿಸಲು ಸೂಚನೆ

ಕಾರವಾರ: ಸಾಮಾನ್ಯ, ವಿಶೇಷ ಘಟಕ ಯೋಜನೆಯಡಿ ಹಾಗೂ ಗಿರಿಜನ ಉಪಯೋಜನೆಯಡಿ ಪ್ರಯೋಜನ ಪಡೆದಕಲಾವಿದರ ವೈಯಕ್ತಿಕ ಫಲಾನುಭವಿಗಳ ವಿವರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಭಿವೃದ್ಧಿ ಪಡಿಸಿರುವ ತಂತ್ರಾಂಶಕ್ಕೆ ಅಪ್ಲೋಡ್ ಮಾಡಬೇಕಾಗಿದ್ದು, ಕಲಾವಿದರು ಮೂರು ದಿನಗಳೊಳಗೆ ತಮ್ಮ ದಾಖಲೆಗಳೊಂದಿಗೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ಸಂಪರ್ಕಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಕೋರಿದ್ದಾರೆ.

ಜಿಲ್ಲಾ ವಾರು ವೈಯಕ್ತಿಕ ಸೌಲಭ್ಯ ಪಡೆದ ಫಲಾನುಭವಿಗಳ ವಿವರವನ್ನು ಆಧಾರ ಸಂಖ್ಯೆ, ಜಾತಿ ಪ್ರಮಾಣ ಪತ್ರದ ಆರ್. ಡಿ. ಸಂಖ್ಯೆ, ಪಡಿತರ ಚೀಟಿ ಸಂಖ್ಯೆ ಅಪ್ಲೋಡ್ ಮಾಡಬೇಕಾಗಿರುವುದರಿಂದ ಸಾಮಾನು, ಪರಿಶಿಷ್ಟ ಜಾತಿ ಮತ್ತು ಪ.ಪಂಗಡದ ಕಲಾವಿದರು ಕಳೆದ 2016 ರಿಂದ 2018ರವರೆಗೆಗಿನ ಮೂರು ವರ್ಷಗಳಿಂದ ಪ್ರಾಯೋಜನೆ ಪಡೆದಿರು ಫಲಾನುಭವಿಗಳು ಹಾಗೂ 2018-19ನೇ ಸಾಲಿನಲ್ಲಿ ಪಡೆಯಲಿಚ್ಚಿಸುವ ಕಲಾವಿದರು ಮೂರು ದಿನಗಳೊಳಗೆ ತಮ್ಮಆಧಾರ ಸಂಖ್ಯೆ, ಜಾಥಿ, ಪಡಿತರಚೀಟಿ, ಝರಾಕ್ಸ್ ಪ್ರತಿಯೊಂದಿಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯಪುರ ಕಚೇರಿ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.