ರುಚಿಯಾದ ಕ್ಯಾಬೇಜ್ ಸಲಾಡ್ ಮಾಡಿ ಸವಿಯಿರಿ

ಅಡುಗೆ ಮನೆ: ಕ್ಯಾಬೇಜ್ ಸಲಾಡ್ ಮಾಡಲು ಬೇಕಾಗುವ ಸಾಮಗ್ರಿಗಳು: ಸಣ್ಣದಾಗಿ ಹೆಚ್ಚಿದ ಕ್ಯಾಬೇಜ್ ಎಲೆಗಳು(ಎಲೆಕೋಸು) 4 ಕಪ್, ಕತ್ತರಿಸಿದ 2 ಹಸಿಮೆಣಸು, ಒಂದು ಚಮಚ ಜೀರಿಗೆ ಹಾಗೂ ಕೊತ್ತಂಬರಿ ಪುಡಿ, 3 ಚಮಚ ಎಣ್ಣೆ, ಸಣ್ಣ ಚಮಚ ಅರಿಶಿನ ಪುಡಿ, ಸ್ವಲ್ಪ ಸಾಸಿವೆ. ರುಚಿಗೆ ತಕ್ಕಷ್ಟು ಉಪ್ಪು.

ಕ್ಯಾಬೇಜ್ ಸಲಾಡ್ ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಸಾಸಿವೆ ಕಾಳುಗಳನ್ನು ಹಾಕಿ. ಅದು ಚಟ ಚಟಾ ಅಂದಾಗ ಅರಿಶಿನ ಹಾಗೂ ಹಸಿಮೆಣಸಿನ್ನು ಹಾಕಿ 20 ಸೆಕೆಂಡ್ ಬಿಡಿ. ನಂತ್ರ ಎಲೆಕೋಸನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ಜೀರಿಗೆ ಕೊತ್ತಂಬರಿ ಪುಡಿ, ಉಪ್ಪನ್ನು ಹಾಕಿ. ನಂತ್ರ ಸರಿಯಾಗಿ ಎರಡು ನಿಮಿಷ ಬಿಟ್ಟು ಗ್ಯಾಸ್ ಬಂದ್ ಮಾಡಿ, ಸರ್ವ್ ಮಾಡಿ.

Categories: ಅಡುಗೆ ಮನೆ

Leave A Reply

Your email address will not be published.