ಭೈರುಂಬೆಯಲ್ಲಿ ಮಕ್ಕಳಿಗಾಗಿ ಪ್ರಾಣಾಯಾಮ ಶಿಬಿರ

ಶಿರಸಿ: ಮನುಷ್ಯನಿಗೆ ದೇಹ ಮತ್ತು ಮನಸ್ಸಿನ ಆರೋಗ್ಯ ಅತಿ ಮುಖ್ಯವಾಗಿದ್ದು, ಪ್ರಾಣಾಯಾಮ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದೆಂದು ಯೋಗಾಚಾರ್ಯ ಬಿ.ಶಂಕರನಾರಾಯಣಶಾಸ್ತ್ರಿ ತಿಳಿಸಿದರು.

ತಾಲೂಕಿನ ಭೈರುಂಬೆ ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆಯಲ್ಲಿ ಜು.12 ರಂದು ಆಯೋಜಿಸಿದ್ದ ಪ್ರಾಣಾಯಾಮ ಸಂಬಂಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಜೀರ್ಣಾಂಗಗಳ ನಿರ್ಮಲೀಕರಣಕ್ಕಾಗಿ ಜಲಚಿಕಿತ್ಸೆ, ಶ್ವಾಸಕೋಶಗಳ ನಿರ್ಮಲೀಕರಣಕ್ಕಾಗಿ ನಿಶ್ವಾಸನ ಚಿಕಿತ್ಸೆಗಳಾದ ಭಸ್ತಿಕಾ, ಹಾಗೂ ಏಕಾಗ್ರತೆ ಸಾಧಿಸಲು ಅನುಲೋಮ ಹಾಗೂ ವಿಲೋಮಪ್ರಾಣಾಯಾಮ, ಭ್ರಮರಿ ಪ್ರಾಣಾಯಾಮಗಳನ್ನು ಹೇಳಿಕೊಟ್ಟರು. ಜೊತೆಗೆ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಸಹಾಯಕವಾಗುವ ಚಕ್ರೀಯ ಧ್ಯಾನವನ್ನು ಮಕ್ಕಳಿಗೆ ಕಲಿಸಿದರು.

ಸೂಕ್ತ ವಿಷಯ ಹಾಗೂ ಪ್ರಾಯೋಗಿಕ ಜ್ಞಾನದೊಂದಿಗೆ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಪೂರಕವಾಗುವ ಆಸನಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಶಿಕ್ಷಕರು, ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.