ಜೀವನದ ಉನ್ನತಿಗೆ ಶಿಕ್ಷಣ ಪೂರಕವಾಗಿರಬೇಕು: ರಂಭಾಪುರಿ ಶ್ರೀ

ಶಿರಸಿ: ಪ್ರಸಿದ್ಧ ವೈದ್ಯ ಡಾ.ವೆಂಕಟರಮಣ ಹೆಗಡೆ ಅವರ ‘ಆಹಾರ–ಆರೋಗ್ಯ’ ಲೇಖನಗಳ ಸಂಗ್ರಹವನ್ನು ಗುರುದ್ವಯರು ಸೇರಿ ತಾಲ್ಲೂಕಿನ ‘ನಿಸರ್ಗ ಮನೆ’ ವೇದ ಅಧ್ಯಯನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಬಾಳೆಹೊನ್ನೂರು ರಂಭಾಪುರಿ ಮಠಾಧೀಶ ವೀರಸೋಮೇಶ್ವ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ದೊಡ್ಡದು. ಇದನ್ನು ಕಾಪಾಡಿಕೊಂಡರೆ ಜೀವನದಲ್ಲಿ ಎಲ್ಲವನ್ನೂ ಸಾಧಿಸಬಹುದು. ಓದಿಗಾಗಿ ಶಿಕ್ಷಣವಲ್ಲ, ಶಿಕ್ಷಣವು ಜೀವನ ವಿಕಾಸಕ್ಕೆ ಪೂರಕವಾಗಬೇಕು. ಇದು ವಿನಾಶಕ್ಕೆ ಕಾರಣವಾಗಬಾರದು. ಯಾವುದೇ ಧರ್ಮದಲ್ಲಿ ಹುಟ್ಟಿದರೂ ಎಲ್ಲವನ್ನು ಮೀರಿದ ಜ್ಞಾನ ಅಧ್ಯಾತ್ಮದಲ್ಲಿದೆ. ಅಧ್ಯಾತ್ಮದಿಂದ ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿದ್ದ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ‘ಹಿಂದೂಸ್ತಾನದಲ್ಲಿ ಎಲ್ಲ ಯತಿಗಳು ಒಂದಾಗಬೇಕು. ಬೇರೆ ಧರ್ಮಗುರುಗಳು ಆಗಾಗ ಒಟ್ಟಾಗಿ ಸೇರುತ್ತಾರೆ. ಹಿಂದೂ ಧರ್ಮ ಗುರುಗಳ ಸಂಖ್ಯೆ ಹೆಚ್ಚಿದ್ದರೂ, ಎಲ್ಲರೂ ಒಟ್ಟಾಗಿ ಸೇರುವುದು ಕಡಿಮೆ. ಧರ್ಮ ರಕ್ಷಣೆಯಾದರೆ ದೇಶ ರಕ್ಷಣೆಯಾಗುತ್ತದೆ’ ಎಂದರು.

ಆಹಾರ, ನಿದ್ರೆ, ಚಟುವಟಿಕೆ ಇವು ಮೂರು ಮನುಷ್ಯನ ಆರೋಗ್ಯಕ್ಕೆ ಅತಿಮುಖ್ಯವಾಗಿವೆ. ಯುಕ್ತವಾಗಿ ಈ ಕ್ರಿಯೆಗಳು ಯೋಗಕ್ಕೆ ಸಮಾನವಾಗಿವೆ. ಯೋಗ ಮತ್ತು ಆರೋಗ್ಯ ಸಹೋದರರಿದ್ದಂತೆ. ಆರೋಗ್ಯವು ಯೋಗದ ಉಪ ಉತ್ಪನ್ನವಿದ್ದಂತೆ. ಇವುಗಳಲ್ಲಿ ವ್ಯತ್ಯಾಸ ಮಾಡಿಕೊಂಡರೆ ಅನಾರೋಗ್ಯ ಉಂಟಾಗುತ್ತದೆ ಎಂದು ಕಿವಿಮಾತು ಹೇಳಿದರು.

ಹುಕ್ಕೇರಿ ಮಠಾಧೀಶ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಡಾ. ವೆಂಕಟರಮಣ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನಸಾ ಹೆಗಡೆ ನಿರೂಪಿಸಿದರು. ಹುಬ್ಬಳ್ಳಿ ಶಿರಗುಪ್ಪಿಯ ವಿದ್ಯಾನಿಧಿ ಶಾಲೆಯ ಮಕ್ಕಳು ಆಕರ್ಷಕ ಯೋಗ ಪ್ರದರ್ಶನ ಮಾಡಿದರು

Categories: ಜಿಲ್ಲಾ ಸುದ್ದಿ

Leave A Reply

Your email address will not be published.