ಒತ್ತಡದಿಂದ ದೂರವಾಗಲು ನಮ್ಮಲ್ಲಿ ಪೃವೃತ್ತಿ ಬೆಳೆಯಬೇಕು: ಕವಿತಾ ಅಡೂರು

ಶಿರಸಿ: ವೃತ್ತಿ ಜೀವನದಲ್ಲಿ ಒತ್ತಡಗಳ ಸಮಸ್ಯೆ ಎದುರಾಗುತ್ತದೆ. ಅದರಿಂದ ದೂರವಾಗಲು ನಮ್ಮಲ್ಲಿ ಒಂದಲ್ಲಾ ಒಂದು ಬಗೆಯ ಪ್ರವೃತ್ತಿ ಬೇಕೇ ಬೇಕು. ಎಲ್ಲ ಮಗುವಿನಲ್ಲೂ ಒಂದಲ್ಲಾ ಒಂದು ಬಗೆಯ ಪ್ರತಿಭೆ ಇದ್ದು ಅದನ್ನು ಸಾಂಸ್ಕೃತಿಕ ವೇದಿಕೆಯ ಮೂಲಕ ಬೆಳೆಸುವ ಕೆಲಸ ಆಗಬೇಕು ಎಂದು ವಿಜಯವಾಣಿ ಪತ್ರಿಕೆಯ ಕಗ್ಗದ ಬೆಳಕಿನಲ್ಲಿ ಅಂಕಣ ಬರಹಗಾರ್ತಿ ಕವಿತಾ ಅಡೂರು ಹೇಳಿದರು.

ತಾಲೂಕಿನ ಹುಲೇಕಲ್‌ನಲ್ಲಿರುವ ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮತ್ತು ‘ಮಂಕುತಿಮ್ಮನ ಕಗ್ಗ’ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಭೆಗೆ ಪೂರಕವಾದ ಪರಿಸರ ಮತ್ತು ತರಬೇತಿ ಒದಗಿಸುವ ಕಾರ್ಯಗಳು ನಡೆಯುತ್ತಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯಾಧ್ಯಕ್ಷ ಎಂ. ಎನ್. ಹೆಗಡೆ ಮಾತನಾಡಿ ಇಂದಿನ ಮಕ್ಕಳು ಕೇವಲ ಅಂಕಗಳಿಗೆ ಮಹತ್ವ ನೀಡುತ್ತಿದ್ದಾರೆ. ಕಲೆ ಸಾಹಿತ್ಯ ವಿಷಯಗಳಲ್ಲಿ ಪ್ರಾಮುಖ್ಯತೆ ನೀಡುತ್ತಿಲ್ಲ, ಬದುಕಿನ ಪಯಣದಲ್ಲಿ ಆಂತರಿಕ ನೆಮ್ಮದಿಗೆ ಕಲೆ, ಸಾಹಿತ್ಯಗಳ ಒಡನಾಟ ಬೇಕೇ- ಬೇಕು ಎಂದು ನುಡಿದರು.

ನಂತರ ಮಂಕುತಿಮ್ಮನ ಕಗ್ಗ ವಾಚನ ಮತ್ತು ವ್ಯಾಖ್ಯಾನ ಎಂಬ ವಿಶಿಷ್ಟವಾದ ಕಾರ್ಯಕ್ರಮ ನಡೆಯಿತು. ಪುತ್ತೂರಿನ ಬರಹಗಾರ್ತಿ ಕವಿತಾ ಅಡೂರು ಕಗ್ಗದ ಕುರಿತಾಗಿ ವ್ಯಾಖ್ಯಾನ ನಡೆಸಿಕೊಟ್ಟರು. ಕು. ಅನನ್ಯಾ ಬಳಂತಿ ಮೊಗರು ಕಗ್ಗವನ್ನು ಸುಶ್ರಾವ್ಯವಾಗಿ ವಾಚಿಸಿದರು.

ವೇದಿಕೆಯಲ್ಲಿ ಪುತ್ತೂರಿನ ಖ್ಯಾತ ಯಕ್ಷಗಾನ ಕಲಾವಿದ ಹರೀಶ ಬಳಂತಿ ಮೊಗರು, ಕಾರ್ಯದರ್ಶಿ ಶಾಂತಾರಾಮ ಹೆಗಡೆ, ಸಹಕಾರ್ಯದರ್ಶಿ ವಿ.ವಿ ಹೆಗಡೆ, ಸದಸ್ಯರುಗಳಾದ ಜಿ. ಟಿ. ಭಟ್ಟ, ಎಂ. ವಿ ಹೆಗಡೆ, ಸುಧೀರ ಪರಾಂಜಪೆ ಮತ್ತು ಪ್ರಾಚಾರ್ಯ ಡಿ. ಆರ್. ಹೆಗಡೆ ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.