ಸುವಿಚಾರ

ಮದೋಪಶಮನಂ ಶಾಸ್ತ್ರಂ ಖಲಾನಾಂ ಕುರುತೇ ಮದಮ್
ಚಕ್ಷುಃ ಪ್ರಕಾಶಕಂ ತೇಜಃ ಉಲೂಕಾನಾಮಿವಾಂಧತಾಮ್ ||

ವಿದ್ಯೆ ಅನ್ನುವುದು, ಅಥವಾ ನಿರ್ದಿಷ್ಟ ಕ್ಷೇತ್ರದಲ್ಲಿನ ಜ್ಞಾನವೆನ್ನುವುದು ವಾಸ್ತವದಲ್ಲಿ ವ್ಯಕ್ತಿಯೊಬ್ಬನ ಅಹಂಕಾರವನ್ನು ಕಡಿಮೆ ಮಾಡುವುದಕ್ಕೆ ಅಂತಲೇ ಇರುವುದು. ವಿದ್ಯೆಯು ವ್ಯಕ್ತಿಯನ್ನು ಮತ್ತೂ ಮತ್ತೂ ವಿನಮ್ರವಾಗಿಸಬೇಕಾದ್ದು. ಆದರೆ ಅದೇ ವಿದ್ಯೆ ಅಥವಾ ಜ್ಞಾನವು ದುರ್ಜನನನ್ನು ಇನ್ನಷ್ಟು ಮದಶಾಲಿಯಾಗಿಸುತ್ತದೆ. ತನ್ನ ಅಲ್ಪಜ್ಞಾನದ ಕಾರಣಕ್ಕೆ ಆತ ಅಹಂಕಾರಿಯಾಗುತ್ತಾನೆ. ಲೋಕದಲ್ಲಿ ಎಲ್ಲರ ಕಣ್ಣುಗಳ ದೀಪದಂತಿರುವ ಬೆಳಕು ಗೂಬೆಗಳಿಗೆ ಮಾತ್ರ ಕುರುಡುತನಕ್ಕೆ ಕಾರಣವಾಗುತ್ತದಲ್ಲ- ಹಾಗೆಯೇ ಇದೂ.
– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.