ರಾಮನಗುಳಿ ಬಳಿ ಗುಡ್ಡ ಕುಸಿತ: ಗೋಕರ್ಣದಲ್ಲಿ ದಿನ ಪತ್ರಿಕೆ, ಹಾಲಿಗೆ ಪರದಾಟ.!!

ಗೋಕರ್ಣ: ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ರಾಮನಗುಳಿ ಬಳಿ ಗುಡ್ಡ ಕುಸಿತದಿಂದ ಈ ಮಾರ್ಗದ ರಸ್ತೆ ಸಂಚಾರ ಬಂದ್ ಆದ ಹಿನ್ನೆಲೆಯಲ್ಲಿ ದಿನಪತ್ರಿಕೆ ಹಾಗೂ ಹಾಲು ಬರದೆ ಗ್ರಾಹಕರು ಪರದಾಡಿದ ಘಟನೆ ಗುರುವಾರ ನಡೆಯಿತು.

ಪ್ರತಿ ದಿನ ಮಂಜಾನೆ ಎದ್ದು ದಿನಪತ್ರಿಕೆ ಓದುವವರು, ಪತ್ರಿಕೆ ಸಿಗದೆ ಚಡಪಡಿಸುತ್ತಿದ್ದರೆ, ಮುಂಜಾನೆ ಚಹಾ ಸವಿಯಲು ಹಾಲಿಗಾಗಿ ಕಾಯಬೇಕಾಯಿತು. ದಿನಪತ್ರಿಕೆ, ಹಾಲು ವಿತರಿಸಿ, ವಿವಿಧ ಕೆಲಸಕ್ಕೆ ತೆರಳುವ ಕೆಲಸಗಾರರು ಈಗ ಬರುತ್ತದೆ,ಆಗ ಬರುತ್ತದೆ ಎಂದು ಕಾದು ನಂತರ ತಮ್ಮ ಇತರ ಕೆಲಸಕ್ಕೆ ಹೋರಟು ಹೋದರು. ಇದರಿಂದ ಮನೆ, ಮನೆಗೆ ತಲುಪಬೇಕಾಗಿದ್ದ, ಹಾಲು ಪತ್ರಿಕೆ ವಿತರಣೆಯಾಗಿಲ್ಲ. ಧಾರವಾಡದಿಂದ ಬರುವ ಕೆ.ಎಮ್ ಎಫ್.ನವರ ಹಾಲಿನ ವಾಹನ ಮಾತ್ರ ರಸ್ತೆ ಮಧ್ಯೆ ಸಿಕ್ಕಿ ಹಾಕಿಕೊಂಡಿತ್ತು, ಉಳಿದ ಸಂಸ್ಥೆಯ ಹಾಲು ಬಂದಿತ್ತಾದರೂ, ಬೇಡಿಕೆಯಷ್ಟು ಪೂರೈಸಲಾಗಲಿಲ್ಲ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.