ಮಿಕ್ಸ್ ತರಕಾರಿ- ಕಾಳುಗಳ ಕೂಟು ಸವಿದು ನೋಡಿ


ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: ಬೇಯಿಸಿದ ತೊಗರಿಬೇಳೆ-1 ಕಪ್, ಬೇಯಿಸಿದ ಹಸಿ ಕಾಳುಗಳು-ಸ್ವಲ್ಪ( ಬಟಾಣಿ, ತೊಗರಿ, ಅವರೆ, ಕಡ್ಲೆಕಾಳು) ಹುಣಸೆ ರಸ ಮತ್ತು ಬೆಲ್ಲ-ರುಚಿಗೆ ತಕ್ಕಷ್ಟು, ರುಬ್ಬಲು ತೆಂಗಿನ ತುರಿ-1 ಬಟ್ಟಲು, ಹುರಿದ ಉದ್ದಿನಬೇಳೆ ಮತ್ತು ಕಡ್ಲೆಬೇಳೆ-1 ಟೀ ಸ್ಪೂನ್, ಕಾಳುಮೆಣಸು ಮತ್ತು ಜೀರಿಗೆ-ತಲಾ 1 ಟೀ ಸ್ಪೂನ್, ಒಣ ಮೆಣಸು-6, ಮೆಂತ್ಯೆ ಕಾಳು-ಕಾಲು ಚಮಚ, ದಾಲ್ಚಿನ್ನಿ ಚಕ್ಕೆ-ಸ್ವಲ್ಪ, ಮರಾಠಿ ಮೊಗ್ಗು-1, ಕೊತ್ತಂಬರಿ ಸೊಪ್ಪು-ಸ್ವಲ್ಪ, ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ರುಬ್ಬುವ ಸಾಮಗ್ರಿಗಳನ್ನು ಮಿಕ್ಸಿ ಜಾರ್‍ಗೆ ಹಾಕಿ ರುಬ್ಬಿಡಿ. ಮೆಂತ್ಯೆ ಕಾಳು, ದಾಲ್ಚಿನ್ನಿ ಚಕ್ಕೆ, ಮರಾಠಿ ಮೊಗ್ಗುಗಳನ್ನು ಹುರಿದು ಪುಡಿ ಮಾಡಿಡಿ. ಸಣ್ಣ ಕುಕ್ಕರ್‍ನಲ್ಲಿ ಒಗ್ಗರಣೆ ಮಾಡಿ ಕಾಳುಗಳನ್ನು ಹಾಕಿ ಬೇಯಿಸಿದ ಕ್ಯಾರೆಟ್, ಆಲೂಗೆಡ್ಡೆ, ಬೀನ್ಸ್ ಹೋಳುಗಳನ್ನು ಹಾಕಿ ಸ್ವಲ್ಪ ಬಾಡಿಸಿ ತೊಗರಿಬೇಳೆ ಸೇರಿಸಿ ಸ್ವಲ್ಪ ಒಣ ಮಸಾಲೆ ಪುಡಿ ಮತ್ತು ರುಬ್ಬಿದ ಮಸಾಲೆ ಹಾಕಿ ಒಂದು ಲೋಟ ನೀರು, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿದರೆ ರುಚಿ- ರುಚಿಯಾದ ಮಿಕ್ಸ್ ತರಕಾರಿ- ಕಾಳುಗಳ ರೆಸಿಪಿ ಸವಿಯಲು ಸಿದ್ಧ.

Categories: ಅಡುಗೆ ಮನೆ

Leave A Reply

Your email address will not be published.