ಬೈಕ್- ಕಾರ್ ಡಿಕ್ಕಿ: ಬೈಕ್ ಸವಾರನಿಗೆ ಗಂಭೀರ ಗಾಯ

ಕುಮಟಾ: ಬೈಕ್ ಹಾಗೂ ಸ್ವಿಪ್ಟ್ ಕಾರ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಬೆಟ್ಕುಳಿ ಬಳಿ ಗುರುವಾರ ಸಂಭವಿಸಿದೆ.

ಹೊನ್ನಾವರ ತಾಲೂಕಿನ ಕಮ್ಮಟೆ ನಿವಾಸಿ ಪವನ ನೀಲಕಂಠ ದೇಶಭಂಡಾರಿ ಗಾಯಗೊಂಡ ಬೈಕ್ ಸವಾರ. ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಈತನು ರಜೆಯ ನಿಮಿತ್ತ ಮನೆಗೆ ಬಂದು ಪುನಃ ಕೈಗಾಕ್ಕೆ ತೆರಳುವಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಗಂಭಿರವಾಗಿ ಗಾಯಗೊಂಡ ಸವಾರನಿಗೆ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ರವಾನಿಸಲಾಗಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.