ತಲೆನೋವು ನಿವಾರಣೆಗೆ ಪಿಂಚ ಮಯೂರಾಸನ ಮಾಡಿ..

ಪಿಂಚ ಮಯೂರಾಸನದ ಅರ್ಥ: ಡಾಲ್ಫಿನ್ ರೀತಿಯ ಭಂಗಿಯನ್ನು ಅರ್ಧ ಪಿಂಚ ಮಯೂರಾಸನ ಎಂದು ಕರೆಯಲಾಗುತ್ತದೆ. ಪಿಂಚ ಎಂದರೆ ನವಿಲಿನ ಹಿಂಬದಿಯ ಗರಿ.  ಈ ಭಂಗಿಯಲ್ಲಿ ನೀವು ಯಾವಾಗಲೂ ದೀರ್ಘವಾಗಿ ಉಸಿರಾಡಬೇಕು. ತಲೆಗೆ ಸರಿಯಾಗಿ ರಕ್ತ ಸಂಚಾರ ಆಗುವ ಕಾರಣದಿಂದಾಗಿ ಈ ಭಂಗಿಯು ತಲೆನೋವು ನಿವಾರಣೆ ಮಾಡುವುದು.

1.ತಾಡಾಸನದೊಂದಿಗೆ ಮೊದಲು ನಿಂತುಕೊಳ್ಳಿ. ದೇಹದ ಮೇಲ್ಭಾಗವನ್ನು ನಿಧಾನವಾಗಿ ಅಧೋ ಮುಖ ಶವಾಸನದಂತೆ ಬಗ್ಗಿಸಿಕೊಳ್ಳಿ. ಎರಡೂ ಅಂಗೈಗಳು ಸಮಾನಾಂತರವಾಗಿ ಭೂಮಿ ಮೇಲಿರಲಿ. ಬೆನ್ನು ಮತ್ತು ಸೊಂಟ ದೃಢವಾಗಿರಲಿ. ದೀರ್ಘವಾಗಿ ಉಸಿರನ್ನು ಪಡೆದುಕೊಂಡು ಒಂದು ಕಾಲನ್ನು ಗೋಡೆಯ ನೆರವಿನಿಂದ ಮೇಲಕ್ಕೆ ಎತ್ತಿಕೊಳ್ಳಿ. ನಿಧಾನವಾಗಿ ಮತ್ತೊಂದು ಕಾಲನ್ನು ಮೇಲಕ್ಕೆತ್ತಿ. ದೇಹದ ಸಮತೋಲವನ್ನು ಕಾಪಾಡಿಕೊಂಡು ಎಳೆದುಕೊಳ್ಳಿ. ಆಸನವನ್ನು ಸರಿಯಾಗಿ ಮಾಡಿಕೊಂಡ ಬಳಿಕ ಕೆಲವು ಸೆಕೆಂಡುಗಳ ಕಾಲ ಹಾಗೆ ಇರಿ. ಈಗ ಮೊದಲಿನ ಸ್ಥಾನಕ್ಕೆ ಬನ್ನಿ

ಪಿಂಚ ಮಯೂರಾಸನದ ಲಾಭಗಳು:

*ಒತ್ತಡ ನಿವಾರಣೆಗೆ ಸಹಕಾರಿ.

*ಏಕಾಗ್ರತೆಯನ್ನು ಸುಧಾರಿಸಲು ನೆರವಾಗುತ್ತದೆ.

*ಕೈಗಳು ಹಾಗೂ ಕಾಲನ್ನು ಬಲಗೊಳಿಸುವುದು. ರಕ್ತ ಪರಿಚಲನೆಗೆ ಇದು ನೆರವಾಗುವುದು.

*ಬೆನ್ನೆಲುಬನ್ನು ದೃಢವಾಗಿಸುತ್ತದೆ.

*ಮನಸ್ಸನ್ನು ಶಾಂತವಾಗಿರಿಸುವುದು.

*ದೇಹದ ಸಮತೋಲನ ಕಾಪಾಡಲು ನೆರವಾಗುವುದು.

* ತಲೆನೋವು ನಿವಾರಣೆ ಮಾಡುವುದು.

Categories: ನಾಟಿ ನಂಟು

Leave A Reply

Your email address will not be published.