ಜು.13 ಕ್ಕೆ ಪತ್ರಿಕಾ ದಿನಾಚರಣೆ- ದತ್ತಿನಿಧಿ ಪುರಸ್ಕಾರ- ಸನ್ಮಾನ ಕಾರ್ಯಕ್ರಮ

ಸಿದ್ದಾಪುರ: ಸ್ಥಳೀಯ ಪ್ರಶಾಂತಿ ಶಾಲೆಯ ಸಾಯಿಕಿರಣ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ, ಗುರುಮನೆ ದತ್ತಿನಿಧಿ ಪುರಸ್ಕಾರ ಹಾಗೂ ಪತ್ರಿಕಾ ವಿತರಕರಿಗೆ ಸನ್ಮಾನ ಜು.13ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.

ವಿಜಯವಾಣಿ ಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕರಾದ ಮೋಹನ ಹೆಗಡೆ ಕಾರ್ಯಕ್ರಮ ಉದ್ಘಾಟಿಸುವರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಭಟ್ಟ ಹೊಸೂರು ಅಧ್ಯಕ್ಷತೆ ವಹಿಸುವರು. ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ,ಸಿದ್ದಾಪುರ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಪ್ರಶಾಂತಿ ಪ್ರೌಢಶಾಲಾ ಅಧ್ಯಕ್ಷ ಆರ್.ಜಿ.ಪೈ ಮಂಜೈನ್ ಉಪಸ್ಥಿತರಿರುವರು.

ಹಿರಿಯ ಯಕ್ಷಗಾನ ಕಲಾವಿದ ಹಾಗೂ ಯಕ್ಷಗಾನ ವೇಷಭೂಷಣ ತಯಾರಕ ಭಾಸ್ಕರ್ ರಾವ್  ಅವರಿಗೆ ಗುರುಮನೆ ದತ್ತಿನಿಧಿ ಪುರಸ್ಕಾರ, ಪತ್ರಿಕಾ ವಿತರಕರಾದ ಮಾರುತಿ ಹಾಲದಕಟ್ಟಾ ಹಾಗೂ ವಸಂತ ಮಡಿವಾಳ ಹೊಸೂರು ಅವರನ್ನು ಸನ್ಮಾನಿಸಲಾಗುವುದು. ತಾಲೂಕಿನ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನೀರಿಂಗಿಸುವಿಕೆ ಹಾಗೂ ಪರಿಸರದ ಮಹತ್ವ ಕುರಿತು ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯೂ ಈ ಸಂದರ್ಭದಲ್ಲಿ ನಡೆಯಲಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.