ಜು.13ಕ್ಕೆ ಅಪರೂಪದ ಎರಡು ಗ್ರಂಥ ಲೋಕಾರ್ಪಣೆ

ಶಿರಸಿ: ನಾಡಿನ ಹಿರಿಯ ವಿದ್ವಾಂಸ ದಿ. ರಾ.ಭ ಹಾಸಣಗಿರವರ ‘ವೇದ ಕಾಲದ ವಿದ್ಯಾವತಿಯರು’ ಮತ್ತು ಅವರ ಮಗ ಪ್ರೋ. ಎಚ್.ಆರ್.ಅಮರನಾಥ ಅವರ ‘ಶನಿದೇವರ ಸತ್ಯ’ ಎಂಬ ಗ್ರಂಥ ಲೋಕಾರ್ಪಣೆ ಜು.13ರ ಸಂಜೆ 4:30ಕ್ಕೆ ನಗರದ ಯೋಗ ಮಂದಿರದಲ್ಲಿ ನಡೆಯಲಿದೆ.

ಕೃತಿಗಳ ಕುರಿತು ಪ್ರೋ. ವಿಜಯನಳಿನಿ ರಮೇಶ ಹಾಗೂ ನಿವೃತ್ತ ಪ್ರಾಚಾರ್ಯ ಆರ್.ಡಿ.ಹೆಗಡೆ ಆಲ್ಮನೆ ಮಾತನಾಡಲಿದ್ದು, ಕೃತಿಯನ್ನು ಹೆಸರಾಂತ ವಿದ್ವಾಂಸ ವಿ. ಕೆರೇಕೈ ಉಮಾಕಾಂತ ಭಟ್ಟ ಅವರು ಲೋಕಾರ್ಪಣೆ ಮಾಡಲಿದ್ದಾರೆ. ತೇಜು ಪ್ರಕಾಶನ ಪ್ರಕಟಿಸಿದ ಕೃತಿಯ ಲೋಕಾರ್ಪಣೆ ಸಂದರ್ಭದಲ್ಲಿ ಹಾಸಣಗಿ ಅವರ ಧರ್ಮಪತ್ನಿ ಸರಸ್ವತಮ್ಮ ಅವರನ್ನು ಗೌರವಿಸಲಾಗುತ್ತಿದೆ.

ರಾ.ಭ ಹಾಸಣಗಿ ಅವರು ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು. ಅವರ ಜನ್ಮ ಶತಾಬ್ಧಿ ಕಳೆದು ಹನ್ನೊಂದು ವರ್ಷ ಆಗಿದೆ. ಆ ಕಾಲದ ಸಾಂಸ್ಕøತಿಕ ಸ್ಪೂರ್ತಿ, ವಿಮರ್ಶಕರು, ಆದರ್ಶ ಶಿಕ್ಷಕರು, ಜೀವನ ಮಾರ್ಗರ್ಶಕರು, ಕವಿ ಎಲ್ಲವೂ ಹೌದು. ಗೋಪಾಲಕೃಷ್ಣ ಅಡಿಗರ ಗೆಳೆತನ, ಬಿ.ಎಚ್.ಶ್ರೀಧರ ಅವರ ಒಡನಾಟ, ವರಕವಿ ಬೇಂದ್ರೆ ಅವರ ಪ್ರೀತಿ ಎಲ್ಲವೂ ಇತ್ತು.

ಶಿಕ್ಷಕ ವೃತ್ತಿಗೆ ಮಾರ್ಗದರ್ಶಕರಾಗಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ಬೋಧ ಪ್ರಬಲವಾದ ಪಾಠಗಳನ್ನು ಮಾಡುತ್ತಲೇ ಗ್ರಂಥ ರಚನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಯಕ್ಷನಾಟಕಗಳು 1950ರಲ್ಲಿ ಪ್ರಕಟಗೊಂಡು ಯಕ್ಷಗಾನದ ಮೊಟ್ಟ ಮೊದಲ ಆಕರ ಗ್ರಂಥವಾಗಿದೆ. ವೈದಿಕ ವಾಗ್ಮಯ ಪರಿಚಯ, ವಾಲ್ಮೀಕಿಯ ರಾಮ, ವ್ಯಾಸನ ಕೃಷ್ಣ, ಕನ್ನಡ ಸಂಸ್ಕøತ ಲಘು ಕ್ರಿಯಾ ಕೋಶ, ಭಾರತೀಯ ಬೌಥಿಕ ವಿಜ್ಞಾನ, ವೇದ ಕಾಲದ ವಿದ್ಯಾವತಿಯರು ಅವರ ಇತರ ಕೃತಿಗಳು.

ಇವರ ಪುತ್ರ ಎಚ್.ಆರ್.ಅಮರನಾಥ ಕವಿ, ನಾಟಕಕಾರ, ಲೇಖಕ, ವಿಮರ್ಶಕರು, ಆಂಗ್ಲ ಸಾಹಿತ್ಯದ ಪ್ರಭಾವಿ ಉಪನ್ಯಾಸಕರು. ಹುಚ್ಚು ಹಾದಿಯ ಪಯಣಿಗ, ಹತ್ತರೊಳಗೆ ಹನ್ನೊಂದು, ಅಮರ ಪಥ, ದೀಪ ಗಾಣಿಕೆ, ಮೂರು ಮಹಾ ಕಾವ್ಯಗಳು, ಭಾರತ ಸಿಂಧು ರಶ್ಮಿಯ ದೃಷ್ಟಿ ಸೃಷ್ಟಿ, ಆಡಿದ್ದೇ ಆಟ, ಮುಂಗುಸಿಯ ಪ್ರತಾಪ ಸೇರಿದಂತೆ ಇತರ ಕೃತಿಗಳನ್ನು ಪ್ರಕಟಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.