ಅಮ್ಮೇನಳ್ಳಿ ಸೇತುವೆ ಶಿಥಿಲ.! ಸೂಚನಾ ಫಲಕವೇ ನೆಲಕ್ಕುರುಳುತ್ತಿದೆ


ಶಿರಸಿ: ದುರ್ಬಲ ಸೇತುವೆ ತಿರುವಿನಲ್ಲಿದೆ ನಿಧಾನ ಸಾಗಿರಿ ಎಂಬ ಫಲಕವೇ ದುರ್ಬಲಗೊಂಡು ನೆಲಕ್ಕೆ ಅಪ್ಪಿಕೊಂಡಿದೆ. ಇಲ್ಲಿ ಫಲಕ ದುರ್ಬಲವೇ ಅಥವಾ ಸೇತುವೆಯೋ ಎಂಬ ಜಿಜ್ಞಾಸೆ ಜನಸಾಮಾನ್ಯರಲ್ಲಿ ಉದ್ಭವವಾಗಿದೆ.

ಶಿರಸಿ-ಕುಮಟಾ ರಸ್ತೆಯ ಅಮ್ಮಿನಳ್ಳಿ ಗ್ರಾಮದ ತಿರುವಿನಲ್ಲಿ ಅತ್ಯಂತ ಹಳೆಯ ಹಾಗೂ ಇಕ್ಕಟ್ಟಾದ ಸೇತುವೆಯಲ್ಲಿ ದಿನನಿತ್ಯ ಸಾವಿರಾರು ಲಘು ಮತ್ತು ಭಾರೀ ವಾಹನಗಳು ಒಡಾಡುವ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಈ ಸೇತುವೆ ದುರ್ಬಲ ಎಂದು ಸಾರುವ ಮತ್ತು ಸದ್ರಿ ಸೇತುವೆಯ ಮೇಲೆ ನಿಧಾನವಾಗಿ ಸಾಗಿರಿ ಎಂದು ಸೂಚಿಸುವ ಫಲಕವೇ ಸೇತುವೆಗಿಂತ ಮೊದಲೇ ದುರ್ಬಲವಾಗಿ ಭೂಮಿಗೆ ಚುಂಬಿಸಿಕೊಂಡಿರುವುದು ಈ ಅಣುಕಿಗೆ ಕಾರಣವಾಗಿದೆ.

ಕಳೆದ 3-4 ತಿಂಗಳಿನಿಂದ ದುರ್ಬಲಗೊಂಡಿರುವ ಫಲಕ ಲೋಕೋಪಯೋಗಿ ಇಲಾಖೆಯು ಎಚ್ಚರಿಕೆ ಎಂಬ ಕೆಂಪು ಅಕ್ಷರದ ಅಂಶವನ್ನು ತಲೆಬರಹದಲ್ಲಿ ಪ್ರಕಟಿಸಿದ್ದು ರಸ್ತೆಯ ಅಂಚಿನಲ್ಲಿರುವುದರಿಂದ ಇಂದು ಈ ಫಲಕವೇ ದುರ್ಬಲಗೊಂಡು ಪ್ರಯಾಣಿಕರಿಗೆ ಯಾವ ಸಂದರ್ಭದಲ್ಲಿ ತೊಂದರೆ ಉಂಟು ಮಾಡುವುದೋ ಎಂಬ ಆತಂಕದಲ್ಲಿ ಸ್ಥಳಿಕರು ಅಭಿಪ್ರಾಯ ವ್ಯಕ್ತಪಡಿಸುವುದಲ್ಲದೇ ಆದಷ್ಟು ಬೇಗ ನಿದ್ರೆಯಲ್ಲಿರುವ ಲೋಕೋಪಯೋಗಿ ಇಲಾಖೆಯು ಎಚ್ಚರಗೊಂಡು ದುರ್ಬಲಗೊಂಡಿರುವ ಫಲಕ ಸಮರ್ಪಕಗೊಳಿಸಲು ಪ್ರಯಾಣಿಕರು ಆಗ್ರಹಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.