ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ: ಡಾ.ಎ.ಕೆ.ಕಿಣಿ


ಶಿರಸಿ: ಎಮ್.ಎಮ್. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್.ಸಿ.ಸಿ, ಎನ್. ಎಸ್.ಎಸ್. ರೆಡ್‍ಕ್ರಾಸ್ ಘಟಕಗಳ ಸಹಯೊಗದಲ್ಲಿ ಮಹಾವಿದ್ಯಾಲಯದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಡಾ.ಎ.ಕೆ.ಕಿಣಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು ಇದು ದಿನಾಚರಣೆಗಷ್ಟೇ ಸೀಮಿತವಾಗಿರಬಾರದು, ದಿನನಿತ್ಯದ ನಮ್ಮ ಕೈಂಕರ್ಯದ ಜೊತೆ- ಜೊತೆಗೆ ಪರಿಸರ ಸಂರಕ್ಷಣೆ ನಿಷ್ಠತೆಯು ಕಾಣಬೇಕು. ಇಂದು ಮನುಷ್ಯ ತನ್ನ ಅತಿಯಾಸೆಯಿಂದ ಪರಿಸರವನ್ನು ದಿನನಿತ್ಯ ಹಾನಿಗೊಳಪಡಿಸುತ್ತಿದ್ದಾನೆ. ವಿದ್ಯಾರ್ಥಿಗಳಾದ ನೀವು ಈಗಿನಿಂದಲೇ ಪರಿಸರದ ತೆರನಾಗಿ ಪ್ರೀತಿಯನ್ನ, ಕಾಳಜಿಯನ್ನ, ಹೊಂದಬೇಕಾಗಿದೆ ಎಂದರು.

ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟರು. ಎನ್.ಸಿ.ಸಿ. ಅಧಿಕಾರಿ ಡಾ. ಟಿ.ಎಸ್.ಹಳೆಮನೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಿಬ್ಬಂದಿ ಕಾರ್ಯದರ್ಶಿ ಪ್ರೊ. ಜಿ.ಟಿ. ಭಟ್, ಎನ್.ಎಸ್.ಎಸ್. ಅಧಿಕಾರಿ ಪ್ರೊ. ಕೆ.ಎನ್.ರೆಡ್ಡಿ , ರೆಡ್‍ಕ್ರಾಸ್ ಕಾರ್ಯಕ್ರಮ ಅಧಿಕಾರಿ ಪ್ರೊ. ರಾಘವೇಂದ್ರ ಹೆಗಡೆ ಉಪಸ್ಥಿತರಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.