ಇಂದು ‘ಅಘನಾಶಿನಿ ಕಣಿವೆ ಉಳಿಸಿ’ ಜನ ಜಾಗೃತಿ ಸಭೆ

ಶಿರಸಿ: ಅಘನಾಶಿನಿ ಕಣಿವೆ ಸಂರಕ್ಷಣಾ ಹೋರಾಟ ಸಮಿತಿ. ಸಿದ್ದಾಪುರ, ಸ್ವರ್ಣವಲ್ಲೀ ಶ್ರೀಮದ್ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಜೀಯವರ ದಿವ್ಯ ಸಾನಿಧ್ಯದಲ್ಲಿ ‘ಅಘನಾಶಿನಿ ಕಣಿವೆ ಉಳಿಸಿ’ ಜನ ಜಾಗೃತಿ ಸಭೆಯನ್ನು ಸಿದ್ದಾಪುರ ತಾಲೂಕಿನ ನೆಲೆಮಾವ್ ಮಠದಲ್ಲಿ ಜು.10 ಬುಧವಾರದಂದು ಮಧ್ಯಾಹ್ನ 3.30 ಗಂಟೆಗೆ ಆಯೋಜಿಸಿದೆ.

ಜಿಲ್ಲೆಯ ಜನತೆಯೆಲ್ಲ ಒಟ್ಟಾಗಿ ಅಘನಾಶಿನಿ ಕಣಿವೆಯ 3000 ಹೆಕ್ಟೇರ್ ಪ್ರದೇಶವನ್ನು ಶಿವಮೊಗ್ಗಾ ಜಿಲ್ಲೆಯ ಶರಾವತಿ ಅಭಯಾರಣ್ಯಕ್ಕೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಬೇಕು. ಅದಕ್ಕಾಗಿ ನಮ್ಮ ಭೂ ರಕ್ಷಣೆಗೆ ಈ ಸಭೆಯನ್ನು ಆಯೋಜಿಸಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.