ಅಬ್ಬರಿಸಿದ ಮುಂಗಾರು: ವಿವಿಧೆಡೆ ಮನೆಗಳಿಗೆ ಹಾನಿ


ಹೊನ್ನಾವರ: ತಾಲೂಕಿನಲ್ಲಿ ಮಂಗಳವಾರ ಮುಂಜಾನೆಯಿಂದಲೇ ಮುಂಗಾರುಮಳೆ ಅಬ್ಬರಿಸಿದ್ದು ಬಿಟ್ಟೂ ಬಿಡದೇ ಸುರಿಯುತ್ತಿರುವ ಭಾರೀ ಮಳೆ- ಗಾಳಿಗೆ ಮನೆ, ಕೊಟ್ಟಿಗೆಗಳ ಮೇಲೆ ಮರಗಳು ಉರುಳಿ ಅಪಾರ ಹಾನಿ ಸಂಭವಿಸಿದೆ.

ಜಲವಳ್ಳಿ ಗ್ರಾಮದ ತಿಪ್ಪಯ್ಯ ನಾರಾಯಣ ನಾಯ್ಕ ಅವರ ಮನೆಯ ಮೇಲಿನ ಶೀಟ್ ಹಾರಿಹೋಗಿದೆ. ಇಲ್ಲಿನ ರಾಮ ಗಣಪತಿ ಶೆಟ್ಟಿ ಅವರ ಮನೆಗೂ ಅಪಾರ ಹಾನಿ ಸಂಭವಿಸಿದೆ. ಮಾವಿನಕುರ್ವಾ ಹೋಬಳಿಯ ಹೊಸಾಡದಲ್ಲಿ ಶಾಂತಾರಾಮ ಶ್ರೀನಿವಾಸ ನಾಯಕ ಅವರ ಮನೆ ಮೇಲೆ ಮರಬಿದ್ದು ಸುಮಾರು 39000 ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಆರೊಳ್ಳಿ ಮುಂಡಗೋಡದ ಗಂಗಾಧರ ಮುರ್ತು ಶೇಟ್ ಅವರ ಕೊಟ್ಟಿಗೆಗೆ ಅಪಾರ ಹಾನಿಯಾಗಿದ್ದು ಕೊಟ್ಟಿಗೆ ಮುರಿದು ಕೊಟ್ಟಿಗೆಯೊಳಗಿದ್ದ ಒಂದು ಆಕಳು ಅಸುನೀಗಿದೆ. ಕಂದಾಯ ನಿರೀಕ್ಷರು ಗ್ರಾಮ ಲೆಕ್ಕಿಗರೊಟ್ಟಿಗೆ ಹೊನ್ನಾವರ ತಹಶೀಲ್ದಾರ ವಿ.ಆರ್.ಗೌಡ ಅವರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

Categories: ಚಿತ್ರ ಸುದ್ದಿ

Leave A Reply

Your email address will not be published.