ಅಘನಾಶಿನಿ ಕಣಿವೆ ಉಳಿಸಿ ಜನಜಾಗೃತಿ ಸಭೆಯ ನಿರ್ಣಯಗಳು ಇಂತಿವೆ..!

ಶಿರಸಿ: ಸಿದ್ದಾಪುರ ತಾಲೂಕಿನ ನೆಲಮಾವು ಮಠದಲ್ಲಿ ಅಘನಾಶಿನಿ ಕಣಿವೆ ಸಂರಕ್ಷಣಾ ಸಮಿತಿ ಆಯೋಜನೆಯಲ್ಲಿ ಬುಧವಾರ ನಡೆದ ಅಘನಾಶಿನಿ ಕಣಿವೆ ಉಳಿಸಿ ಜನಜಾಗೃತಿ ಸಭೆಯು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಐದು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ.
1) ಅಘನಾಶಿನಿ ಕಣಿವೆ ಸೇರಿದಂತೆ ಕೆನರಾ ವೃತ್ತದ ಅರಣ್ಯಗಳನ್ನು ಶಿವಮೊಗ್ಗಾ ಶರಾವತಿ ಅಭಯಾರಣ್ಯಕ್ಕೆ ಸೇರ್ಪಡೆ ಮಾಡಿರುವ ರಾಜ್ಯ ಪರಿಸರ ಅರಣ್ಯ ಇಲಾಖೆಯ ಆದೇಶವನ್ನು ರದ್ದುಪಡಿಸಬೇಕು.

2) ಪಶ್ಚಿಮ ಘಟ್ಟದ ಅಘನಾಶಿನಿ, ಶರಾವತಿ, ಬೇಡ್ತಿ, ಕಾಳಿ ನದಿಗಳ ದಿಕ್ಕು ತಿರುಗಿಸುವ ಯೋಜನೆಗಳನ್ನು ಸರ್ಕಾರ ಕೈ ಬಿಡಬೇಕು.

3) ಮಲೆನಾಡು ಜಿಲ್ಲೆಗಳ ಶಾಸಕರು, ಸಂಸದ ಸದಸ್ಯರು ಒಟ್ಟಾಗಿ ಪರಿಸರ ವಿರೋಧಿ ಯೋಜನೆಗಳ ವಿರುದ್ಧ ಒಟ್ಟಾಗಿ ಧ್ವನಿ ಎತ್ತಬೇಕು.

4) ಗ್ರಾಪಂ, ತಾಪಂ, ಜಿಪಂ ಸಭೆಗಳಲ್ಲಿ ಸರ್ಕಾರದ ಪರಿಸರ ವಿರೋಧಿ ವಿಚಾರದ ವಿರುದ್ಧ ಠರಾವು ಕೈಗೊಂಡು ಆಡಳಿತ ನಾಯಕರ ಗಮನ ಸೆಳೆಯಬೇಕು.

5) ಪಶ್ಚಿಮ ಘಟ್ಟಗಳ ನದಿ ತಿರುವು ಯೋಜನೆ ವಿರೋಧಿಸುವದರ ಜೊತೆಯಲ್ಲಿ ನದೀ ಕಣಿವೆ ಅರಣ್ಯಗಳ ಸಂರಕ್ಷಣೆಗೆ ಜನತೆ ಕಂಕಣ ಬದ್ಧರಾಗಬೇಕೆಂದು ಸಭೆ ಒತ್ತಾಯಿಸಿದೆ.

Categories: ಚಿತ್ರ ಸುದ್ದಿ

Leave A Reply

Your email address will not be published.