ಸುವಿಚಾರ

ಯಥಾ ಯಥಾ ವಿಶತ್ಯಸ್ಯಾ ಹೃದಯೇ ಹೃದಯೇಶ್ವರಃ
ತಥಾ ತಥಾ ಬಹಿರ್ಯಾತೌ ಮನ್ಯೇ ಸಂಕೋಚತಃ ಕುಚೌ ||

ಸುಭಾಷಿತಕಾರನು ಇಲ್ಲಿ ನವಯುವತಿಯ ಕುಚಗಳು ಅದೆಂತು ಮೂಡಿದವು, ಮತ್ತವೆಂತು ಬೆಳೆಯುವವು ಅನ್ನುವುದಕ್ಕೆ ಅತ್ಯಂತ ಕಾವ್ಯಮಯವಾದ ರೀತಿಯಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾನೆ. ನವಯುವತಿಯ ಪ್ರಿಯಕರನು (ಅವನ ಕುರಿತಾದ ವಿಚಾರಗಳು) ಆಕೆಯ ಹೃದಯವನ್ನು ತುಂಬಿಕೊಳ್ಳುತ್ತ ಹೋದಂತೆಲ್ಲ, ಅದುವರೆಗೂ ಎದೆಯೊಳಗಿದ್ದ ಕುಚಗಳು ಪ್ರಿಯಕರನ ವಿಚಾರಗಳಿಂದಾಗಿ ನಾಚಿಕೆಯುಂಟಾಗಿ ಹೊರಗೆ ಬಂದವು ಅನ್ನುವುದು ಕವಿಕಲ್ಪನೆ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.