ಮುಸುಕಿನ ಜೋಳದ ಪರೋಟ ಮಾಡಿ ಸವಿದು ನೋಡಿ..


ಅಡುಗೆ ಮನೆ: ಸ್ವೀಟ್ ಕಾರ್ನ್ ಅಂದರೆ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಿಗು ಕೂಡಾ ಇದು ಆರೋಗ್ಯಕ್ಕೆ ಒಳ್ಳೆಯದೇ. ಈ ಮಳೆಗಾಲದಲ್ಲಿ ಸ್ವೀಟ್ ಕಾರ್ನ್( ಜೋಳ) ಅಬ್ಬರ ಜೋರು. ಇದರಿಂದ ವಿವಿಧ ರೀತಿಯ ತಿನಿಸು ಮಾಡಿ ಸವಿಯಬಹುದು. ಅದೇ ರೀತಿ ಜೋಳದಿಂದ ಮಾಡಬಹುದಾದ ಪರೋಟದ ಬಗ್ಗೆ ತಿಳಿದುಕೊಳ್ಳಿ.

ಸಾಮಗ್ರಿ: ಸ್ವೀಟ್ ಕಾರ್ನ್-1 ಕಪ್, ಗೋಧಿ ಹಿಟ್ಟು-2 ಕಪ್, ಈರುಳ್ಳಿ-1, ಜೀರಿಗೆ ಪುಡಿ-ಸ್ವಲ್ಪ, ಹಸಿ ಮೆಣಸಿನಕಾಯಿ-1, ಉಪ್ಪು-ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು-ಸ್ವಲ್ಪ, ಎಣ್ಣೆ-ಸ್ವಲ್ಪ.

ವಿಧಾನ: ಕಾರ್ನ್ ಕಾಳಿಗೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಮಿಕ್ಸಿ ಮಾಡಿ. ಗೋಧಿ ಹಿಟ್ಟಿಗೆ ಉಪ್ಪು, ಎಣ್ಣೆ ಮತ್ತು ನೀರು ಹಾಕಿ ಕಲಸಿ ಅರ್ಧ ಗಂಟೆ ಮುಚ್ಚಿಡಿ. ನಂತರ ಲಟ್ಟಣಿಗೆಗೆ ಎಣ್ಣೆ ಸವರಿ ಪರೋಟ ಲಟ್ಟಿಸಿ ಕಾದ ತವಾದ ಮೇಲೆ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿ.

Categories: ಅಡುಗೆ ಮನೆ

Leave A Reply

Your email address will not be published.