ಮತ್ಸ್ಯಾಸನದಿಂದ ಏನೆಲ್ಲಾ ಲಾಭವಿದೆ ತಿಳಿದುಕೊಳ್ಳಿ


ಅರ್ಥ: ಮತ್ಸ್ಯ ಎಂದರೆ ಮೀನು ಎಂದರ್ಥ. ದಶಾವತಾರದಲ್ಲಿ ವಿಷ್ಣುವಿನ ಮೊದಲ ಅವತಾರ ಮತ್ಸ್ಯಾವತಾರ. ಈ ಆಸನವು ಮತ್ಸ್ಯದ ಸ್ಥಿತಿಯನ್ನು ಹೋಲುವುದರಿಂದ ಈ ಹೆಸರಿನಿಂದ ಕರೆಯಲ್ಪಟ್ಟಿದೆ.

ಮಾಡುವ ವಿಧಾನ: ಮೊದಲು ಪದ್ಮಾಸನದ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ನಂತರ ಸುಪ್ತ ಪದ್ಮಾಸನದ ಸ್ಥಿತಿಗೆ ಬನ್ನಿ. ಈಗ ಎರಡೂ ಕೈಗಳನ್ನು ಭುಜದ ಹತ್ತಿರ ತೆಗೆದುಕೊಂಡು ಬಂದು ಬೆನ್ನನ್ನು ಮೇಲಕ್ಕೆ ಎತ್ತಿ ಎದೆಯನ್ನು ಮೇಲಕ್ಕೆ ಎತ್ತಿ. ತಲೆಯ ನೆತ್ತಿಯನ್ನು ನೆಲಕ್ಕೆ ತಾಗಿಸಬೇಕು. ಎರಡು ಕೈಗಳಿಂದ ಕಾಲ್ಬೆರಳುಗಳನ್ನು ಹಿಡಿದುಕೊಳ್ಳಿ. ಮೊಣಕೈಗಳನ್ನು ನೆಲಕ್ಕೆ ತಾಗಿಸಿ. ಬಲಗೈನಿಂದ ಎಡಗಾಲಿನ ಹೆಬ್ಬೆರಳನ್ನು, ಎಡಗೈನಿಂದ ಬಲಗಾಲಿನ ಹೆಬ್ಬೆರಳನ್ನು ಹಿಡಿಯಿರಿ. ಎರಡು ಮೊಣಕೈಗಳು ಪಕ್ಕೆಲುಬಿನ ಪಕ್ಕದಲ್ಲಿ ನೆಲದಲ್ಲಿ ತಾಗಿರಬೇಕು. ನಂತರ ಎರಡು ಹೆಬ್ಬೆರಳುಗಳನ್ನು ಬಿಟ್ಟು ಕೈಗಳನ್ನು ತಲೆ ಮತ್ತು ಭುಜದ ಹತ್ತಿರ ತೆಗೆದುಕೊಂಡು ಎದೆಯನ್ನು ಮತ್ತು ತಲೆಯ ನೆತ್ತಿಯನ್ನು ಕೆಳಗೆ ಇಳಿಸಿ. ಮೊಣಕೈಗಳನ್ನು ನೆಲಕ್ಕೆ ಒತ್ತುತ್ತ ಮೇಲೆ ಬಂದು ಕಾಲುಗಳನ್ನು ಮುಂದೆ ಚಾಚಿ.

ಉಪಯೋಗ : 1. ಈ ಆಸನ ಮಾಡುವುದರಿಂದ ಎದೆಯ ಭಾಗ ಹಿಗ್ಗಲ್ಪಡುತ್ತದೆ.
2. ಅಸ್ತಮಾ, ಹೃದಯ ಸಮಸ್ಯೆ, ಸಕ್ಕರೆ ಕಾಯಿಲೆ, ಥೈರಾಯ್ಡ್‌ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಆಸನ ಉತ್ತಮ ಪರಿಹಾರ ನೀಡುವುದು.

Categories: ನಾಟಿ ನಂಟು

Leave A Reply

Your email address will not be published.