ಬಾವಿಗೆ ಬಿದ್ದ ಜಿಂಕೆ ರಕ್ಷಣೆ

ಹೊನ್ನಾವರ: ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದ ಜಿಂಕೆಯು ತಾಲೂಕಿನ ಹಾಡಗೇರಿಯ ನಾಗೇಶ ಪ್ರಭು ಅವರ ತೋಟದ ಬಾವಿಗೆ ಬಿದ್ದ ಘಟನೆ ಸೋಮವಾರ ನಡೆದಿದೆ.

ಬಾವಿಯೊಳಗೆ ಜಿಂಕೆ ಮರಿ ಬಿದ್ದ ಸುದ್ದಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಜಿಂಕೆಯನ್ನು ಬಾವಿಯಿಂದ ಸುರಕ್ಷಿತವಾಗಿ ಮೇಲಕ್ಕೆತ್ತಿ ಕಾಡಿಗೆ ಮರಳಿಸಿದ್ದಾರೆ. ಆರ್‌ಎಫ್‌ಒ ಶರತ್ ಶೆಟ್ಟಿ ಮಾರ್ಗದರ್ಶನದಲ್ಲಿ ಅರಣ್ಯಾಧಿಕಾರಿ ವಿನೋದ ಗೌಡ, ನಿರೀಕ್ಷಕ ಗಣೇಶ, ವನರಕ್ಷಕ ಬಸವನಗೌಡ ಜಿಂಕೆಯನ್ನು ರಕ್ಷಿಸುವಲ್ಲಿ ನೆರವಾದರು.

Categories: ಚಿತ್ರ ಸುದ್ದಿ

Leave A Reply

Your email address will not be published.