ಶಿರಸಿ: ರಾಜ್ಯದಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಸುದ್ಧಿ ದಿನದಿಂದ ದಿನಕ್ಕೆ ಬಿಸಿ- ಬಿಸಿ ಚರ್ಚೆಗೆ ಕಾರಣವಾಗುತ್ತಿದೆ. ದಿನವೂ ಒಂದೆರಡು ಶಾಸಕರು ರಾಜೀನಾಮೆ ಸಲ್ಲಿಸಿ ರೆಸಾರ್ಟ್ ಸೇರಿಕೊಳ್ಳುತ್ತಿದ್ದಾರೆ. ಜನ ನಾಯಕರ ಈ ರೀತಿಯ ನಡೆಯನ್ನು ವಿರೋಧಿಸಿ ನಗರದ ಬ್ಲಾಕ್ ಕಾಂಗ್ರೇಸ್ ವತಿಯಿಂದ ಜು.10 ಬುಧವಾರ ಇಲ್ಲಿನ ಪೋಸ್ಟ್ ಆಫೀಸ್ ಎದುರಿನ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.
ಪಕ್ಷದ ಜಿಲ್ಲಾ, ಬ್ಲಾಕ್, ಘಟಕ , ವಾರ್ಡ್, ಬೂತ್ಗೆ ಸಂಬಂಧಪಟ್ಟ ಎಲ್ಲ ಪದಾಧಿಕಾರಿಗಳು ಹಾಗೂ ಎಲ್ಲ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ರಾಜ್ಯ ಮಟ್ಟದ ಮಾಜಿ ಪದಾಧಿಕಾರಿಗಳು, ಸದಸ್ಯರು, ಎಲ್ಲ ಸ್ತರದ ಜನಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಬ್ಲಾಕ್ ಕಾಂಗ್ರೇಸ್ ಶಿರಸಿ ಅಧ್ಯಕ್ಷ ಜಗದೀಶ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.